alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಪರೋಪಕಾರ ಮತ್ತು ಸದ್ಭಾವನೆಯಲ್ಲಿ ದಿನ ಕಳೆಯಲಿದ್ದೀರಿ. ಸೇವೆ ಮತ್ತು ಪುಣ್ಯದ ಕೆಲಸಗಳನ್ನು ಮಾಡುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ಮತ್ತು ಕೆಲಸದ ಭಾರ ಅಧಿಕವಾಗಿರಲಿದೆ.

ವೃಷಭ ರಾಶಿ

ವಾದ-ವಿವಾದಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನಿಮ್ಮ ಮಾತುಗಳಿಂದ ಇತರರು ಆಕರ್ಷಿತರಾಗುತ್ತಾರೆ. ಅದರಿಂದ ನಿಮಗೆ ಲಾಭವಾಗುತ್ತದೆ. ಇದರಿಂದ ಹೊಸ ಸಂಬಂಧಗಳಲ್ಲಿ ಸದ್ಭಾವನೆ ಹೆಚ್ಚಲಿದೆ.

ಮಿಥುನ ರಾಶಿ

ಭಾವನೆ ಮತ್ತು ಸಂವೇದನಶೀಲತೆಯಲ್ಲಿ ಸಿಕ್ಕು ಸ್ತ್ರೀ ವರ್ಗದೊಂದಿಗೆ ಸಂಬಂಧ ಬೆಸೆಯಬೇಡಿ. ನೀರಿನ ಪ್ರವಾಹ ಅಥವಾ ವಿದ್ಯುತ್ ನಿಂದ ಅಪಾಯವಿದೆ. ವ್ಯಾಧಿಯ ಕಾರಣದಿಂದ ನಿಮ್ಮ ಮನಸ್ಸು ಗೊಂದಲಕ್ಕೀಡಾಗಲಿದೆ, ಇದರಿಂದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಕರ್ಕ ರಾಶಿ

ಇವತ್ತು ಪ್ರಸನ್ನವಾಗಿರುತ್ತೀರಿ. ಹೊಸ ಕಾರ್ಯವನ್ನು ಆರಂಭಿಸುವ ಸಾಧ್ಯತೆ ಇದೆ. ಮಿತ್ರರು ಮತ್ತು ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಸಿಗುವ ಯಶಸ್ಸಿನಿಂದ ನಿಮ್ಮ ಉತ್ಸಾಹ ವೃದ್ಧಿಸಲಿದೆ.

ಸಿಂಹ ರಾಶಿ

ಇವತ್ತು ನಿಮಗೆ ಮಿಶ್ರ ಫಲವಿದೆ. ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಿರಿ. ಅವರಿಂದ ಉತ್ತಮ ಸಹಕಾರ ಸಿಗಲಿದೆ. ಆದಾಯ ವೃದ್ಧಿಯಾಗಲಿದೆ. ಖರ್ಚು ಕೂಡ ಹೆಚ್ಚಾಗುತ್ತದೆ.

ಕನ್ಯಾ ರಾಶಿ

ನಿಮ್ಮ ವಾಕ್ ಚಾತುರ್ಯದಿಂದ್ಲೇ ಸ್ನೇಹಿತರನ್ನು ಸಂಪಾದಿಸುತ್ತೀರಿ. ಇದು ಭವಿಷ್ಯದಲ್ಲಿ ಕೂಡ ನಿಮಗೆ ಲಾಭದಾಯಕವಾಗಲಿದೆ. ವೈಚಾರಿಕ ರೂಪದಲ್ಲಿ ಸಮೃದ್ಧಿ ಸಿಗಲಿದೆ. ಶರೀರ, ಆರೋಗ್ಯ ಮತ್ತು ಮನಸ್ಸು ಪ್ರಸನ್ನವಾಗಿರಲಿದೆ.

ತುಲಾ ರಾಶಿ

ಇವತ್ತಿನ ದಿನ ಕೊಂಚ ಪ್ರತಿಕೂಲವಾಗಿರಲಿದೆ, ಹಾಗಾಗಿ ಸಮಾಧಾನದಿಂದಿರಿ. ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮಾನಸಿಕ ರೂಪದಲ್ಲೂ ಅಸ್ವಸ್ಥತೆಯ ಅನುಭವವಾಗಲಿದೆ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಅವರೊಂದಿಗೆ ಸುತ್ತಾಟ, ಮೋಜು ಮಸ್ತಿ ಮಾಡುತ್ತೀರಿ. ಇದಕ್ಕಾಗಿ ಹಣ ಕೂಡ ಖರ್ಚಾಗಲಿದೆ.

ಧನು ರಾಶಿ

ಇವತ್ತು ನಿಮಗೆ ಶುಭ ದಿನ. ಆರ್ಥಿಕ ವಿಷಯದಲ್ಲಿ ಉಚಿತ ಯೋಜನೆಗಳನ್ನು ಮಾಡಲಿದ್ದೀರಿ. ಇತರರಿಗೆ ಸಹಾಯ ಮಾಡಲು ಪ್ರಯತ್ನ ಪಡುತ್ತೀರಿ. ಪ್ರತಿ ಕಾರ್ಯವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ.

ಮಕರ ರಾಶಿ

ಇವತ್ತು ಮಧ್ಯಮ ಫಲದಾಯಕ ದಿನ. ಬೌದ್ಧಿಕ ಕಾರ್ಯಗಳಿಗೆ ಇವತ್ತು ಉತ್ತಮ ದಿನ. ಬರವಣಿಗೆ, ಸಾಹಿತ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಆರಂಭಿಸಿದ್ರೆ ಅದು ಯಶಸ್ವಿಯಾಗಲಿದೆ.

ಕುಂಭ ರಾಶಿ

ಅಧಿಕ ಆಲೋಚನೆಗಳಿಂದ ಆಯಾಸದ ಅನುಭವವಾಗಲಿದೆ. ಮನಸ್ಸಿನಲ್ಲಿ ಕ್ರೋಧದ ಭಾವನೆ ಮೂಡಲಿದೆ. ಇದರಿಂದ ಕೆಟ್ಟ ಘಟನೆಗಳು ಸಂಭವಿಸಬಹುದು. ಕಳ್ಳತನ, ಅನೈತಿಕ ಕಾರ್ಯ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ.

ಮೀನ ರಾಶಿ

ನಿಮ್ಮಲ್ಲಿರುವ ಕಲಾವಿದ ಮತ್ತು ಲೇಖಕನ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಸಿಗಲಿದೆ. ಉದ್ಯಮದಲ್ಲಿ ಪಾಲುದಾರಿಕೆಗೆ ಉತ್ತಮ ಸಮಯ. ದಿನದ ಕಾರ್ಯದಿಂದ ಕೊಂಚ ವಿರಾಮ ಪಡೆದು ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತೀರಿ.

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...