alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಸಂಕಷ್ಟಗಳು ಎದುರಾಗಬಹುದು, ಜಾಗರೂಕರಾಗಿರಿ. ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ.

ವೃಷಭ ರಾಶಿ

ಇಂದು ಹೆಚ್ಚು ಭಾವುಕರಾಗುತ್ತೀರಿ, ಇದರಿಂದ ಅಸ್ವಸ್ಥಗೊಳ್ಳುವ ಸಾಧ್ಯತೆ ಇದೆ. ಶಾರೀರಿಕ ಆರೋಗ್ಯದ ಮೇಲೂ ಇದರಿಂದ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಹೊಸ ಕಾರ್ಯ ಆರಂಭಿಸಬೇಡಿ.

ಮಿಥುನ ರಾಶಿ

ಇಂದು ಮೋಜು-ಮಸ್ತಿಯಲ್ಲಿ ನಿಮ್ಮನ್ನು ನೀವೇ ಮರೆಯಲಿದ್ದೀರಿ. ಮನರಂಜನೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಮಿತ್ರರೊಂದಿಗೆ ಪ್ರವಾಸ, ಸುತ್ತಾಟ ಮಾಡಲಿದ್ದೀರಿ.

ಕರ್ಕ ರಾಶಿ

ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ. ತವರಿನಿಂದ ಶುಭ ಸಮಾಚಾರ ದೊರೆಯುತ್ತದೆ. ಕುಟುಂಬದಲ್ಲಿ ಕೂಡ ಸುಖ-ಶಾಂತಿ, ನೆಮ್ಮದಿ ನೆಲೆಸಲಿದೆ.

ಸಿಂಹ ರಾಶಿ

ಪ್ರಣಯ ಪ್ರಸಂಗಕ್ಕೆ ಇವತ್ತಿನ ದಿನ ಅನುಕೂಲಕರವಾಗಿದೆ. ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಗತ್ಯ. ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಯಿಂದ ತೊಂದರೆ ಅನುಭವಿಸಲಿದ್ದೀರಿ.

ಕನ್ಯಾ ರಾಶಿ

ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಉಲ್ಲಾಸದ ಅಭಾವ ಉಂಟಾಗಲಿದೆ. ಚೇತನ ಶಕ್ತಿಯ ಕೊರತೆ ಕಾಡಲಿದೆ. ಸಮಾಜದಲ್ಲಿ ಅಪಮಾನ ಆಗದಂತೆ ಎಚ್ಚರ ವಹಿಸಿ.

ತುಲಾ ರಾಶಿ

ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ. ಪ್ರಿಯ ವ್ಯಕ್ತಿಗಳೊಂದಿಗಿನ ಭೇಟಿ ಆನಂದದಾಯಕವಾಗಿರಲಿದೆ. ಸಮಾಜದಲ್ಲಿ ಗೌರವ-ಪ್ರತಿಷ್ಠೆ ದೊರೆಯಲಿದೆ.

ವೃಶ್ಚಿಕ ರಾಶಿ

ನಿಗದಿತ ಕಾರ್ಯ ಪೂರ್ಣಗೊಳ್ಳದೇ ಇರುವುದರಿಂದ ಹತಾಶೆ ಉಂಟಾಗಬಹುದು. ಮಹತ್ವಪೂರ್ಣ ಕಾರ್ಯ ಅಥವಾ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಡಿ. ಮನೆಯಲ್ಲೂ ಜಗಳದ ವಾತಾವರಣವಿರುತ್ತದೆ.

ಧನು ರಾಶಿ

ಇವತ್ತು ನಿಮಗೆ ಶುಭ ದಿನ. ಕಾರ್ಯಸಿದ್ಧಿ ಯೋಗವಿದೆ. ಧನ ಲಾಭವಾಗುವ ಸಾಧ್ಯತೆ ಇದೆ. ಲಕ್ಷ್ಮಿಯ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ.

ಮಕರ ರಾಶಿ

ಮಾತು ಮತ್ತು ವರ್ತನೆಯನ್ನು ನೋಡಿ ಭ್ರಮೆಗೆ ಒಳಗಾಗಬೇಡಿ. ಕೋಪ ಹೆಚ್ಚಾಗಬಹುದು. ಇದರಿಂದ ಉಗ್ರ ಚರ್ಚೆ, ವಾದ-ವಿವಾದದಲ್ಲಿ ತೊಡಗಿಕೊಳ್ಳುತ್ತೀರಿ. ಮನಸ್ಸು ವ್ಯಗ್ರವಾಗಿರುತ್ತದೆ.

ಕುಂಭ ರಾಶಿ

ಇವತ್ತು ನಿಮ್ಮ ಪಾಲಿಗೆ ಲಾಭದಾಯಕ ದಿನ. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಿ. ಅದರಿಂದಾಗಿ ಸಮಾಜದಲ್ಲಿ ಗೌರವ-ಪ್ರತಿಷ್ಠೆ ವೃದ್ಧಿಸಲಿದೆ.

ಮೀನ ರಾಶಿ

ಇವತ್ತು ನಿಮಗೆ ಶುಭ ದಿನ. ಪರೋಪಕಾರಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ವ್ಯಾಪಾರದಲ್ಲಿ ಉಚಿತ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ವ್ಯಾಪಾರ ವೃದ್ಧಿಸಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...