alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ದಿನದ ಆರಂಭದಲ್ಲಿ ಮಾನಸಿಕ ಗೊಂದಲ ನಿಮ್ಮನ್ನು ಕಾಡುತ್ತದೆ. ಇತರರೊಂದಿಗೆ ಹಠಕ್ಕೆ ಬಿದ್ದು ವ್ಯವಹಾರ ಮಾಡುತ್ತೀರಿ. ಅದನ್ನು ಬಿಟ್ಟು ಸಮಾಧಾನದಿಂದ ವರ್ತಿಸಿ. ನಿಮ್ಮ ಮಧುರ ಮಾತುಗಳಿಂದ ಯಾರನ್ನಾದ್ರೂ ಸೆಳೆಯಬಹುದು.

ವೃಷಭ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಸ್ವಲ್ಪ ಹದಗೆಡಲಿದೆ. ಮನೆಯಲ್ಲೂ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಕೆಲಸಗಳಲ್ಲಿ ಉತ್ಸಾಹದ ಕೊರತೆ ಕಾಣಬಹುದು. ಆರ್ಥಿಕ ಲಾಭದ ಸಾಧ್ಯತೆ ಇದೆ.

ಮಿಥುನ ರಾಶಿ

ವೃತ್ತಿಪರ ಕ್ಷೇತ್ರದಲ್ಲಿ ಲಾಭದ ಸಾಧ್ಯತೆಗಳಿವೆ. ಸ್ತ್ರೀಯರಿಂದ ಲಾಭವಾಗಬಹುದು. ಪ್ರೀತಿಪಾತ್ರರನ್ನು ಭೇಟಿಯಾಗಲಿದ್ದೀರಿ. ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಮಧ್ಯಾಹ್ನದ ನಂತರ ಚಿಂತೆಗಳು ಹೆಚ್ಚಾಗಲಿವೆ.

ಕರ್ಕ ರಾಶಿ

ಇಂದು ಆನಂದವಾಗಿ ಕಾಲ ಕಳೆಯಲಿದ್ದೀರಿ. ಉದ್ಯಮ ಮತ್ತು ವ್ಯಾಪಾರ ಮಾಡುವವರಿಗೆ ಇಂದು ಲಾಭದಾಯಕ ದಿನ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಕುಟುಂಬಸ್ಥರು ಮತ್ತು ಮಿತ್ರರೊಂದಿಗೆ ಸಮಯ ಕಳೆಯುತ್ತೀರಿ.

ಸಿಂಹ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಅನುಕೂಲಕರ ದಿನ. ಕಚೇರಿಯಲ್ಲಿ ಕೆಲಸದ ಒತ್ತಡ ಅಧಿಕವಾಗಿರುತ್ತದೆ. ವಿದೇಶಕ್ಕೆ ತೆರಳಲು ಉತ್ಸುಕರಾಗಿರುವವರಿಗೆ ಅವಕಾಶ ಒದಗಿ ಬರುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಇಂದು ಊಟ-ತಿಂಡಿ ಬಗ್ಗೆ ವಿಶೇಷ ಗಮನ ಹರಿಸುವುದು ಒಳಿತು. ಹೊಸ ಕೆಲಸ ಪ್ರಾರಂಭಿಸಲು ಸಮಯ ಅನುಕೂಲಕರವಾಗಿಲ್ಲ. ಕೆಲಸದ ಒತ್ತಡದಿಂದಾಗಿ ಶಿಥಿಲತೆ ಮತ್ತು ಮಾನಸಿಕ ವ್ಯಗ್ರತೆಯ ಅನುಭವವಾಗಲಿದೆ.

ತುಲಾ ರಾಶಿ

ದಾಂಪತ್ಯ ಜೀವನದಲ್ಲಿ ಸುಖದ ಅನುಭವವಾಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮಾನಸಿಕವಾಗಿ ವ್ಯಗ್ರತೆಯ ಅನುಭವವೂ ಆಗಬಹುದು. ಯೋಗ ಮತ್ತು ಧ್ಯಾನದಿಂದ ಮಾನಸಿಕ ಶಾಂತಿ ಕಾಪಾಡಿಕೊಳ್ಳಲಿದ್ದೀರಿ.

ವೃಶ್ಚಿಕ ರಾಶಿ

ಇಂದು ನಿಮಗೆ ಶುಭ ದಿನ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಇದ್ದರೂ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಆರ್ಥಿಕ ಆಯೋಜನೆ ಕೂಡ ಯಶಸ್ವಿಯಾಗಲಿದೆ.

ಧನು ರಾಶಿ

ವೈಚಾರಿಕತೆ ಮತ್ತು ಮಧುರ ವಾಣಿಯಿಂದ ಜನರನ್ನು ಆಕರ್ಷಿಸುತ್ತೀರಿ. ಮಧುರ ಮಾತುಗಳಿಂದ ಹೊಸ ಸಂಬಂಧ ಏರ್ಪಡಬಹುದು. ಆರ್ಥಿಕ ವಿಷಯಗಳಲ್ಲಿ ಯಶಸ್ಸು ಸಿಗಲಿದೆ.

ಮಕರ ರಾಶಿ

ಇಂದು ಎಲ್ಲಾ ಕಾರ್ಯಗಳನ್ನು ಆತ್ಮವಿಶ್ವಾಸಗಳಿಂದ ಮಾಡಿ ಮುಗಿಸಲಿದ್ದೀರಿ. ಸರ್ಕಾರದೊಂದಿಗಿನ ಆರ್ಥಿಕ ವ್ಯವಹಾರಗಳಲ್ಲೂ ನಿಮಗೆ ಸಫಲತೆ ಸಿಗಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ.

ಕುಂಭ ರಾಶಿ

ಆನಂದ ಮತ್ತು ಉತ್ಸಾಹದಲ್ಲಿ ವೃದ್ಧಿಯಾಗಲಿದೆ. ಕೌಟುಂಬಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸಿ. ಎಲ್ಲಾ ಕಾರ್ಯಗಳನ್ನೂ ದೃಢಚಿತ್ತರಾಗಿ ಆತ್ಮವಿಶ್ವಾಸದಿಂದ ಮಾಡುತ್ತೀರಿ.

ಮೀನ ರಾಶಿ

ಇಂದು ಯಾವುದೇ ರೀತಿಯ ಹಣದ ಹೂಡಿಕೆ ಮಾಡಬೇಡಿ. ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಹೆತ್ತವರೊಂದಿಗೆ ವಿಶ್ವಾಸದಿಂದಿರಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...