alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಹಿರಿಯರ ಸಹಕಾರ ದೊರೆಯುತ್ತದೆ. ಅದರಿಂದ ಸಂತೋಷವೂ ವೃದ್ಧಿಸುತ್ತದೆ. ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಶುಭ ಸಮಾಚಾರ ದೊರೆಯಲಿದೆ.

ವೃಷಭ ರಾಶಿ

ಇವತ್ತು ನಿಮಗೆ ಶುಭ ಫಲವಿದೆ. ಕೃಷಿಕರಿಗೆ ಲಾಭದಾಯಕ ದಿನ. ಹಣಕಾಸು ವಹಿವಾಟು ನಡೆಸುವವರಿಗೂ ದಿನ ಉತ್ತಮವಾಗಿದೆ. ಆರ್ಥಿಕ ಸಮಸ್ಯೆ ಬಗೆಹರಿಯಲಿದೆ.

ಮಿಥುನ ರಾಶಿ

ಇಂದು ಹೆಚ್ಚು ಪ್ರತಿಕೂಲತೆಯ ಅನುಭವವಾಗಲಿದೆ. ಮಾನಸಿಕವಾಗಿ ವ್ಯಗ್ರತೆ ಹಾಗೂ ಶಾರೀರಿಕವಾಗಿ ಶಿಥಿಲತೆ ಕಾಣಿಸಿಕೊಳ್ಳುತ್ತದೆ. ಹೊಸ ಕೆಲಸ ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ.

ಕರ್ಕ ರಾಶಿ

ದಿನವಿಡೀ ಮಾನಸಿಕ ಮತ್ತು ಶಾರೀರಿಕವಾಗಿ ಅಸ್ವಸ್ಥತೆ ಕಾಡುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ಯಾರೊಂದಿಗಾದರೂ ಜಗಳ ಏರ್ಪಡಬಹುದು.

ಸಿಂಹ ರಾಶಿ

ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಸಾಂಸಾರಿಕ ಸಮಸ್ಯೆಗಳಿಂದ ಮನಸ್ಸು ಉದಾಸೀನಗೊಳ್ಳುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಅಪಜಯ ಕಾದಿದೆ.

ಕನ್ಯಾ ರಾಶಿ

ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಮನೆಯಲ್ಲಿ ಸುಖಮಯ ವಾತಾವರಣವಿರುತ್ತದೆ. ಒಡಹುಟ್ಟಿದವರಿಂದ ಸಹಕಾರ ಸಿಗಲಿದೆ.

ತುಲಾ ರಾಶಿ

ನಿಮ್ಮ ಮಾತಿನ ಮಧುರತೆ ಮತ್ತು ವೈಚಾರಿಕ ಭಾವನೆಗಳಿಂದ ಇತರರ ಮೇಲೆ ಪ್ರಭಾವ ಬೀರಲಿದ್ದೀರಿ. ಸಂಬಂಧ ಕೂಡ ಸುಧಾರಿಸುತ್ತದೆ. ಕೋಪದ ಕೈಗೆ ಬುದ್ಧಿ ಕೊಡಬೇಡಿ.

ವೃಶ್ಚಿಕ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆ ಉಂಟಾಗಲಿದೆ. ಇದರಿಂದ ವ್ಯಗ್ರತೆ ಹೆಚ್ಚಾಗುತ್ತದೆ. ಹಣ ಮತ್ತು ಕೀರ್ತಿಗೆ ಹಾನಿಯಾಗಬಹುದು.

ಧನು ರಾಶಿ

ಪ್ರತಿಸ್ಪರ್ಧಿಗಳ ವಿರುದ್ಧ ನಿಮಗೆ ಗೆಲುವು ಸಿಗುತ್ತದೆ. ಮಾನಸಿಕವಾಗಿ ಉತ್ಸಾಹದಿಂದಿರುತ್ತೀರಿ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

ಮಕರ ರಾಶಿ

ಇಂದು ಮಿಶ್ರಫಲವಿದೆ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ.

ಕುಂಭ ರಾಶಿ

ಆರ್ಥಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಮನೆಯಲ್ಲಿ ಆನಂದದ ವಾತಾವರಣ ಇರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ.

ಮೀನ ರಾಶಿ

ಕೋರ್ಟ್ – ಕಚೇರಿ ವ್ಯವಹಾರದಲ್ಲಿ ಇಂದು ತೊಡಗಿಕೊಳ್ಳಬೇಡಿ. ಇಂದು ಎಲ್ಲಾ ಕಾರ್ಯದಲ್ಲೂ ಏಕಾಗ್ರತೆಯ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

 

 

 

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...