alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ವ್ಯಾಪಾರಿಗಳು ಹೆಚ್ಚಿನ ಹಣ ಹೂಡಿಕೆ ಮಾಡಿ ಹೊಸ ಕಾರ್ಯ ಆರಂಭಿಸಲಿದ್ದಾರೆ. ಭವಿಷ್ಯಕ್ಕಾಗಿಯೂ ಆರ್ಥಿಕ ಯೋಜನೆಗಳನ್ನು ರೂಪಿಸಬಹುದು.

ವೃಷಭ ರಾಶಿ

ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ಉದ್ಯೋಗಿಗಳಿಗೆ ಇಂದು ಶುಭ ದಿನ. ಆದಾಯ ವೃದ್ಧಿ ಮತ್ತು ಪದೋನ್ನತಿಯ ಸಮಾಚಾರ ದೊರೆಯುತ್ತದೆ. ಸರ್ಕಾರಿ ಲಾಭ ದೊರೆಯುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ತಾಯಿಯ ಆರೋಗ್ಯದಲ್ಲಿ ಏರುಪೇರಾಗಲಿದೆ. ಆರ್ಥಿಕ ನಷ್ಟ ಮತ್ತು ಮಾನಹಾನಿಯ ಸಾಧ್ಯತೆ ಇದೆ.

ಕರ್ಕ ರಾಶಿ

ನಕಾರಾತ್ಮಕ ವ್ಯವಹಾರ ಮತ್ತು ತಪ್ಪು ತಿಳುವಳಿಕೆ ನಿಮ್ಮನ್ನು ಗೊಂದಲಕ್ಕೀಡು ಮಾಡಲಿದೆ. ಕಣ್ಣುಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಕೆಲಸದ ವಿಚಾರದಲ್ಲಿ ಸಂತೋಷ ಸಿಗಲಿದೆ.

ಸಿಂಹ ರಾಶಿ

ನಕಾರಾತ್ಮಕ ವಿಷಯಗಳಿಂದ ದೂರವೇ ಇರಿ. ಊಟ- ತಿಂಡಿ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಿ. ಆಕಸ್ಮಿಕ ಖರ್ಚು ಎದುರಾಗಬಹುದು. ಚಿಕಿತ್ಸೆಗಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ಪ್ಯಾಪಾರದಲ್ಲಿ ಪಾಲುದಾರರ ಜೊತೆಗೆ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಲಿದೆ.

ಕನ್ಯಾ ರಾಶಿ

ಇಂದು ಆರ್ಥಿಕ ಲಾಭದ ಯೋಗವಿದೆ. ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸಮಾಚಾರ ದೊರೆಯಲಿದೆ. ಧಾರ್ಮಿಕ ಕಾರ್ಯ ಅಥವಾ ಪ್ರವಾಸದಿಂದ ಹಣ ಖರ್ಚಾಗಲಿದೆ. ಒಡಹುಟ್ಟಿದವರಿಂದ್ಲೂ ಲಾಭವಾಗುವ ಸಾಧ್ಯತೆ ಇದೆ.

ತುಲಾ ರಾಶಿ

ಇವತ್ತು ಮನಸ್ಸಿನಲ್ಲಿ ಅಶಾಂತಿಯ ಭಾವ ಇರಲಿದೆ. ಇಂದು ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಡಿ. ಅದೃಷ್ಟ ಇವತ್ತು ನಿಮ್ಮ ಜೊತೆಗಿಲ್ಲ. ಇದರಿಂದ ನಿರಾಸೆ ನಿಮ್ಮನ್ನು ಆವರಿಸಲಿದೆ.

ವೃಶ್ಚಿಕ ರಾಶಿ
ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ಇಂದು, ನೀವು ಮತ್ತು ನಿಮ್ಮ ಸಂಗಾತಿ ನಿಜವಾಗಿಯೂ ಆಳವಾದ ಹಾಗೂ ಆತ್ಮೀಯವಾದ ಪ್ರಣಯದ ಚರ್ಚೆಯನ್ನು ಹೊಂದುತ್ತೀರಿ.

ಧನು ರಾಶಿ

ನಿಮ್ಮ ಆರೋಗ್ಯ ಇಂದು ಪರಿಪೂರ್ಣವಾಗಿಲ್ಲದಿದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ಮನರಂಜನೆ ಮತ್ತು ವೈಭೋಗಗಳ ಮೇಲೆ ಅತಿಯಾಗಿ ಖರ್ಚು ಮಾಡಬೇಡಿ.

ಮಕರ ರಾಶಿ

ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಮಧ್ಯಾಹ್ನದ ನಂತರ ಮಿತ್ರರನ್ನು ಭೇಟಿಯಾಗಲಿದ್ದೀರಿ. ಸುಂದರ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಆದಾಯ ವೃದ್ಧಿಸಲಿದೆ. ವ್ಯಾಪಾರಿಗಳಿಗೆ ಲಾಭವಿದೆ.

ಕುಂಭ ರಾಶಿ

ಭೂಮಿ ಮತ್ತು ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಮಧ್ಯಾಹ್ನದ ನಂತರ ಸುಖ-ಶಾಂತಿಯ ಯೋಗವಿದೆ. ಸ್ನೇಹಿತರ ಸಹಕಾರ ದೊರೆಯುತ್ತದೆ. ಅಧಿಕ ಯೋಚನೆಯಿಂದ ಮನಸ್ಸು ವಿಚಲಿತಗೊಳ್ಳಬಹುದು.

ಮೀನ ರಾಶಿ

ಇವತ್ತು ನಿಮಗೆ ಶುಭ ದಿನ. ಕಲೆಯ ಬಗ್ಗೆ ಒಲವು ಹೆಚ್ಚಲಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...