alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಉದ್ಯೋಗದಲ್ಲಿ ಪದೋನ್ನತಿ ಯೋಗವಿದೆ. ಮಿತ್ರರೊಂದಿಗೆ ಸುತ್ತಾಡಲಿದ್ದೀರಿ. ಬಟ್ಟೆ, ಅಲಂಕಾರಿಕ ಸಾಮಗ್ರಿ ಮತ್ತು ಮನರಂಜನೆಗಾಗಿ ಹಣ ಖರ್ಚಾಗಲಿದೆ. ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ವೃಷಭ ರಾಶಿ

ಕೋಪ ಮತ್ತು ಆವೇಶ ವೃದ್ಧಿಯಾಗದಂತೆ ಕಾಳಜಿ ವಹಿಸಿ. ನಿಮ್ಮ ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳ ಬಗ್ಗೆ ಜಾಗರೂಕರಾಗಿ ಇರುವುದು ಒಳಿತು. ಕೆಲಸ ಪೂರ್ಣಗೊಳ್ಳದೇ ಇದ್ದಲ್ಲಿ ಹೆಚ್ಚು ನಿರಾಶರಾಗಬೇಡಿ.

ಮಿಥುನ ರಾಶಿ

ದೇಹದಲ್ಲೂ ಸ್ಪೂರ್ತಿ ಮತ್ತು ಪ್ರಫುಲ್ಲತೆಯ ಅಭಾವ ಉಂಟಾಗಲಿದೆ. ನಿದ್ದೆಯ ಕೊರತೆ ಕಾಡಲಿದೆ. ಕುಟುಂಬದವರ ವಿರೋಧ ಮತ್ತು ಮುನಿಸನ್ನು ಎದುರಿಸಬೇಕಾಗಿ ಬರಬಹುದು. ಇವತ್ತು ಆರಂಭಿಸಿದ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ.

ಕರ್ಕ ರಾಶಿ

ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಚೆನ್ನಾಗಿರಲಿದೆ. ಕುಟುಂಬದವರೊಂದಿಗೆ ಆನಂದ ಮತ್ತು ಉಲ್ಲಾಸದಿಂದ ಸಮಯ ಕಳೆಯಲಿದ್ದೀರಿ. ಹಣ ಕೊಡು ಕೊಳ್ಳುವಿಕೆಯಲ್ಲಿ ಜಾಗರೂಕರಾಗಿರಿ.

ಸಿಂಹ ರಾಶಿ

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಮನೆಯಲ್ಲಿ ಕುಟುಂಬಸ್ಥರೊಂದಿಗೆ ವಾದ – ವಿವಾದ ಉಂಟಾಗಬಹುದು. ಸಾಹಿತ್ಯ ಮತ್ತು ಕಲೆಯ ಕ್ಷೇತ್ರದಲ್ಲಿ ಹೊಸದೇನನ್ನಾದ್ರೂ ಮಾಡಲು ಪ್ರೇರಣೆ ಸಿಗುತ್ತದೆ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.

ಕನ್ಯಾ ರಾಶಿ

ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಲಾಗದೇ ಕೋಪ ಬರುತ್ತದೆ. ಧ್ಯಾನ ಮತ್ತು ಯೋಗಾಸನ ಮಾಡಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಉತ್ತಮ ವಾತಾವರಣವಿರಲಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ.

ತುಲಾ ರಾಶಿ

ಇವತ್ತು ನೀವು ಎಲ್ಲಾ ರೀತಿಯ ಮಾನಸಿಕ ಭಾರದಿಂದ ಮುಕ್ತರಾಗಲಿದ್ದೀರಿ. ಶಾರೀರಿಕವಾಗಿಯೂ ಆರೋಗ್ಯವಾಗುರುತ್ತೀರಿ. ಕುಟುಂಬದಲ್ಲೂ ಖುಷಿ-ಸಂತೋಷ ನೆಲೆಸಲಿದೆ.

ವೃಶ್ಚಿಕ ರಾಶಿ

ಗಹನವಾದ ಚಿಂತನೆ ಮತ್ತು ಆಧ್ಯಾತ್ಮಿಕತೆಯಲ್ಲಿ ಮನಸ್ಸು ಮುಳುಗಲಿದೆ. ಮಾತಿನ ಮೇಲೆ ನಿಯಂತ್ರಣವಿರಲಿ. ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿ.

ಧನು ರಾಶಿ

ನಿಮ್ಮ ಸಾಮಾಜಿಕ ಬದುಕಿನಲ್ಲಿ ಸುಧಾರಣೆಯಾಗಲಿದೆ. ಒಳ್ಳೆ ಕೆಲಸ ಮಾಡಲು ಪ್ರಯತ್ನಿಸುತ್ತೀರಿ. ಆದ್ರೆ ಕೊಂಚ ವಿಳಂಬವಾಗಬಹುದು.ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ. ಹಣ ಮತ್ತು ಕಾನೂನಿಗೆ ಸಂಬಂಧಪಟ್ಟ ವಿಷಯದಲ್ಲಿ ಜಯ ಸಿಗಲಿದೆ.

ಮಕರ ರಾಶಿ

ಧನಲಾಭವಾಗುವ ಸಂಭವ ಇದೆ. ಅತಿಯಾದ ಭಾವುಕತೆಯಿಂದ ಆತಂಕಗೊಳ್ಳುತ್ತೀರಿ. ಯಾವ ಕಾರ್ಯದಲ್ಲೂ ಅತಿಯಾದ ಆತುರ ಬೇಡ. ಮೋಜು-ಮಸ್ತಿ ಮಾಡುವ ಬಯಕೆಯಾಗಲಿದೆ. ನೀವು ಅಂದುಕೊಂಡ ಕೆಲಸ ಪೂರ್ಣಗೊಳ್ಳಲಿದೆ. ಕೆಲವರು ನಿಮ್ಮ ಐಡಿಯಾಗಳನ್ನು ಕದಿಯಬಹುದು.

ಕುಂಭ ರಾಶಿ

ಹೊಸ ಕಾರ್ಯದ ಆರಂಭಕ್ಕೆ ಇಂದು ಶುಭದಿನ. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದ ಖುಷಿಯಾಗಿರುತ್ತೀರಿ. ಸಣ್ಣ ಪ್ರವಾಸ ಯೋಗವಿದೆ. ತಾಯಿ ಮತ್ತು ಸ್ತ್ರೀಯರ ವಿಚಾರದಲ್ಲಿ ಹೆಚ್ಚು ಸಂವೇದನಶೀಲರಾಗಿರುತ್ತೀರಿ.

ಮೀನ ರಾಶಿ

ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. ದೀರ್ಘಾವಧಿಗೆ ಆರ್ಥಿಕ ಯೋಜನೆ ರೂಪಿಸಲಿದ್ದೀರಿ.  ಬೌದ್ಧಿಕ ಚರ್ಚೆ, ವಾದ-ವಿವಾದದಲ್ಲಿ ಜಯ ಸಿಗಲಿದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...