alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಎಡೆಬಿಡದಂತೆ ಆಲೋಚನೆಗಳು ಕಾಡುತ್ತವೆ, ಇದರಿಂದ ಗೊಂದಲ ಉಂಟಾಗಬಹುದು. ಇದರಿಂದಾಗಿ ಯಾವುದೇ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನೌಕರಿ ಮತ್ತು ವ್ಯಾಪಾರದಲ್ಲಿ ಸ್ಪರ್ಧೆ ಏರ್ಪಡುತ್ತದೆ.

ವೃಷಭ ರಾಶಿ

ಗೊಂದಲಮಯ ಸ್ಥಿತಿಯಿಂದ ನಿಮಗೆ ತೊಂದರೆ ಆಗಬಹುದು. ಮಹತ್ವದ ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ. ನಿಮ್ಮ ಹಠಮಾರಿ ಸ್ವಭಾವವನ್ನು ಬಿಟ್ಟುಬಿಡಿ. ಇಲ್ಲವಾದಲ್ಲಿ ಅನಾವಶ್ಯಕ ಚರ್ಚೆ, ವಾದ-ವಿವಾದ ಉಂಟಾಗಬಹುದು.

ಮಿಥುನ ರಾಶಿ

ಇವತ್ತು ದಿನದ ಆರಂಭ ಉತ್ತಮವಾಗಿರುತ್ತದೆ. ತನು-ಮನದಲ್ಲಿ ಸ್ಪೂರ್ತಿ ತುಂಬಿರುತ್ತದೆ. ಸ್ನೇಹಿತರೊಡನೆ ಸುತ್ತಾಡಲು ತೆರಳಲಿದ್ದೀರಿ. ರುಚಿಕರ ಭೋಜನ ದೊರೆಯುತ್ತದೆ.

ಕರ್ಕ ರಾಶಿ

ಇವತ್ತು ಅಧಿಕ ಖರ್ಚಿನ ದಿನ. ಮನೆಯ ವಾತಾವರಣ ಕೂಡ ಉತ್ತಮವಾಗಿರುವುದಿಲ್ಲ. ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಮನಸ್ಸಿನಲ್ಲಿ ಅನಿಶ್ಚಿತತೆ ಕಾಡಬಹುದು.

ಸಿಂಹ ರಾಶಿ

ಯಾವುದೇ ವಿಷಯದಲ್ಲಿ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೈಗೆ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಮನಸ್ಸು ಚಿಂತಾಗ್ರಸ್ಥವಾಗಿರುತ್ತದೆ.

ಕನ್ಯಾ ರಾಶಿ

ಹೊಸ ಕಾರ್ಯ ಕೈಗೆತ್ತಿಕೊಳ್ಳಲು ಯಶಸ್ವಿಯಾಗಿ ಯೋಜನೆ ರೂಪಿಸಲಿದ್ದೀರಿ. ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಇಂದು ಶುಭ ಫಲಗಳಿವೆ. ಅಂದುಕೊಂಡ ಕಾರ್ಯಗಳು ಕೈಗೂಡಲಿವೆ.

ತುಲಾ ರಾಶಿ

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಕೋಪ ಎದುರಿಸಬೇಕಾಗಿ ಬರುತ್ತದೆ. ವ್ಯವಹಾರದಲ್ಲೂ ತೊಂದರೆ ಉಂಟಾಗಬಹುದು. ಮಕ್ಕಳ ಬಗ್ಗೆ ಕೂಡ ಚಿಂತೆ ಆವರಿಸಲಿದೆ.

ವೃಶ್ಚಿಕ ರಾಶಿ

ಇವತ್ತಿನ ದಿನ ಶಾಂತವಾಗಿ ಕಳೆಯಲಿದೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅನೈತಿಕ ಕಾರ್ಯಗಳಿಂದ ದೂರವಿರಿ. ಹೊಸ ಸಂಬಂಧ ಸೃಷ್ಟಿಸಿಕೊಳ್ಳುವ ಮುನ್ನ ಆಲೋಚಿಸಿ.

ಧನು ರಾಶಿ

ಬೌದ್ಧಿಕ-ತಾರ್ಕಿಕ ವಿಚಾರ ವಿನಿಮಯಕ್ಕೆ ಇಂದು ಶುಭ ದಿನ. ಸಮಾಜದಲ್ಲಿ ಗೌರವ ಸಿಗಲಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಅವರೊಂದಿಗೆ ಸುತ್ತಾಡುವ ಅವಕಾಶವೂ ಸಿಗುತ್ತದೆ.

ಮಕರ ರಾಶಿ

ವ್ಯಾಪಾರ ದಂಧೆಯಲ್ಲಿ ಯಶಸ್ಸು ಸಿಗುತ್ತದೆ. ಕಾನೂನು ವ್ಯವಹಾರಗಳಿಂದ ದೂರವೇ ಇರಿ. ವ್ಯಾವಹಾರಿಕ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಹಣದ ಕೊಡು-ಕೊಳ್ಳುವಿಕೆಗೆ ಸಮಯ ಸೂಕ್ತವಾಗಿದೆ.

ಕುಂಭ ರಾಶಿ

ನಿಮ್ಮ ಬೌದ್ಧಿಕ ಶಕ್ತಿಯಿಂದಾಗಿ ಬರವಣಿಗೆ ಮತ್ತು ಸೃಜನಾತ್ಮಕ ಕಾರ್ಯಗಳು ಯಶಸ್ವಿಯಾಗುತ್ತವೆ. ಆದ್ರೆ ವಿಚಾರಗಳಲ್ಲಿ ಸ್ಥಿರತೆಯ ಕೊರತೆ ಉಂಟಾಗಲಿದೆ.

ಮೀನ ರಾಶಿ

ಮನೆ, ವಾಹನ ಮತ್ತು ಇತರ ಮಹತ್ವದ ದಾಖಲೆಗಳನ್ನು ಜೋಪಾನ ಮಾಡಿ. ಮನೆಯ ವಾತಾವರಣ ಹದಗೆಡದಂತೆ ನೋಡಿಕೊಳ್ಳಲು ವಾದ-ವಿವಾದಗಳಿಂದ ದೂರವಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...