alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಉದ್ಯಮ ಕ್ಷೇತ್ರದಲ್ಲಿರುವವರು ಸರಿಯಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಅತ್ಯಂತ ವೇಗವಾಗಿ ಮತ್ತು ಯಶಸ್ವಿಯಾಗಿ ಕಾರ್ಯ ಪೂರ್ಣಗೊಳಿಸಲಿದ್ದೀರಿ. ಬೇರೆಯವರಿಂದ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ.

ವೃಷಭ ರಾಶಿ

ಕುಟುಂಬದವರೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೀರಿ. ವಿವಾಹ ಯೋಗವಿದೆ. ನೌಕರಿ ಅಥವಾ ವ್ಯಾಪಾರದಲ್ಲಿ ಹಿನ್ನಡೆ ಉಂಟಾಗಬಹುದು. ಕುಟುಂಬದ ಬಗ್ಗೆಯೂ ಚಿಂತೆ ಕಾಡುತ್ತದೆ. ಸಮಾಧಾನದಿಂದ ಪರಿಹಾರ ಕಂಡುಕೊಳ್ಳಿ.

ಮಿಥುನ ರಾಶಿ

ಆರ್ಥಿಕ ವಿಷಯದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ವ್ಯಾಪಾರ ಇನ್ನಷ್ಟು ವೃದ್ಧಿಯಾಗಲಿದೆ. ತ್ರಿಪಕ್ಷೀಯ ಪಾಲುದಾರಿಕೆಯಿಂದ ಶುಭವಾಗುತ್ತದೆ. ಆದ್ರೆ ಅದರಿಂದ ಸಂಬಂಧಗಳಿಗೆ ಕುಂದುಂಟಾಗುವ ಸಾಧ್ಯತೆಯೂ ಇದೆ.

ಕರ್ಕ ರಾಶಿ

ನೀವು ಅಂದುಕೊಂಡ ಕಾರ್ಯಗಳು ಮತ್ತು ನಿಮ್ಮ ನಿರೀಕ್ಷೆ ಈಡೇರದೇ ಇರುವುದರಿಂದ ಹತಾಶೆ ಆವರಿಸಬಹುದು. ಆತ್ಮೀಯರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಅಗತ್ಯವಿದ್ದಾಗ ಕುಟುಂಬದವರು ಮತ್ತು ಸ್ನೇಹಿತರ ನೆರವು ದೊರೆಯಲಿದೆ.

ಸಿಂಹ ರಾಶಿ

ಕುಟುಂಬದ ಬಗ್ಗೆ ಉದಾರ ಮನೋಭಾವ ಹೊಂದುತ್ತೀರಿ. ಕಚೇರಿಯಲ್ಲಿ ಯುವಕರನ್ನು ಪ್ರೋತ್ಸಾಹಿಸುವಲ್ಲಿ ಸಫಲರಾಗುತ್ತೀರಿ. ಆದ್ರೆ ನಿಮ್ಮೊಂದಿಗೆ ಆತ್ಮೀಯರಾಗಿದ್ದುಕೊಂಡು ಸ್ನೇಹಿತರೇ ಅದನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

ಕನ್ಯಾ ರಾಶಿ

ವೈಯಕ್ತಿಕ ಸಂಬಂಧಗಳು ಪ್ರೇಮಪೂರ್ವಕವಾಗಿಯೂ ಪ್ರಸನ್ನದಾಯಕವಾಗಿಯೂ ಇರುತ್ತವೆ. ವ್ಯಾಪಾರ ವಹಿವಾಟಿನಲ್ಲಿ ಯಶಸ್ಸು ಸಿಗಲಿದೆ. ಅದೃಷ್ಟ ಕೂಡ ನಿಮಗೆ ಸಾಥ್ ನೀಡುತ್ತದೆ. ಹಾಗಾಗಿ ಕೈ ಬಿಚ್ಚಿ ಖರ್ಚು ಮಾಡುತ್ತೀರಿ. ಪ್ರಾಮಾಣಿಕವಾಗಿ ಕೆಲಸ ಮಾಡಲು ಇಚ್ಛಿಸುತ್ತೀರಿ.

ತುಲಾ ರಾಶಿ

ನಿಮ್ಮ ಕಾರ್ಯಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬದಲಾವಣೆಗಳಾಗಲಿವೆ. ಹೊಸ ಅವಕಾಶಗಳು ಎದುರಾಗಲಿವೆ. ಯಶಸ್ಸು ಪಡೆಯಲು ಸಾಕಷ್ಟು ಪ್ರಯತ್ನ ಪಡುತ್ತೀರಿ. ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮ ಹೃದಯದ ಮಾತನ್ನು ಆಲಿಸಿ.

ವೃಶ್ಚಿಕ ರಾಶಿ

ಜೀವನ ನಿಮ್ಮ ಎದುರಿಗೆ ಖಾಲಿ ಕ್ಯಾನ್ವಾಸ್ ಅನ್ನು ಇಟ್ಟಿದೆ ಎಂದುಕೊಳ್ಳಿ, ಈಗ ಆ ಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣಗಳ ಚಿತ್ರವನ್ನು ಅರಳಿಸುವುದು ನಿಮ್ಮ ಕೆಲಸ. ಜವಾಬ್ಧಾರಿ ಅರಿತು ನಡೆದರೆ ನಿಮಗೆ ಯಶಸ್ಸು ಸಿಗುತ್ತದೆ.

ಧನು ರಾಶಿ

ನಿಮ್ಮ ಪಾಲಿಗೆ ಹೊಸ ಯುಗ ಪ್ರಾರಂಭವಾಗಲಿದೆ. ಉದ್ಯಮ ಮತ್ತು ಕಚೇರಿ ಕೆಲಸವನ್ನು ಯಶಸ್ವಿಯಾಗಿ ಪೂರೈಸುತ್ತೀರಿ. ಇದರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರೆಯಲಿದೆ.

ಮಕರ ರಾಶಿ

ಎಲ್ಲರ ನಡುವೆಯೂ ವಿಶಿಷ್ಟ ಛಾಪು ಮೂಡಿಸಲು ಯಶಸ್ವಿಯಾಗುತ್ತೀರಿ. ವೈಯಕ್ತಿಕ ಮತ್ತು ವ್ಯಾಪಾರಿ ಬದುಕಿನಲ್ಲೂ ಧೈರ್ಯ ಮತ್ತು ಸಾಹಸದಿಂದ ಮುನ್ನಡೆಯುತ್ತೀರಿ. ಅಸಾಧ್ಯ ಎನಿಸುವಂತಹ ಕಾರ್ಯವನ್ನೂ ಯಶಸ್ವಿಯಾಗಿ ಮಾಡಲಿದ್ದೀರಿ.

ಕುಂಭ ರಾಶಿ

ನಕಾರಾತ್ಮಕ ವಿಚಾರಗಳನ್ನು ಮನಸ್ಸಿನಿಂದ ಹೊಡೆದೋಡಿಸದೇ ಇದ್ದಲ್ಲಿ ಭಾವನಾತ್ಮಕವಾಗಿ ದುಃಖಿತರಾಗುತ್ತೀರಿ. ಮಿಥುನ ರಾಶಿಯ ವ್ಯಕ್ತಿಯೊಬ್ಬರು ನಿಮ್ಮ ಬದುಕಿನಲ್ಲಿ ಪ್ರಸನ್ನತೆ ಮತ್ತು ಆನಂದವನ್ನು ತರಲಿದ್ದಾರೆ.

ಮೀನ ರಾಶಿ

ಮನಸ್ಸಿನಲ್ಲಿ ಗೊಂದಲ ಮೂಡಲಿದೆ. ಹಳೆ ಆಚಾರ ವಿಚಾರಗಳನ್ನು ಬದಲಾಯಿಸುತ್ತೀರಿ. ನಿಮ್ಮ ದೃಷ್ಟಿಕೋನದಲ್ಲೂ ಹೊಸತನ ಮೂಡಲಿದೆ. ಬದಲಾವಣೆಗೆ ನಾಂದಿ ಹಾಡುತ್ತೀರಿ. ಆಳವಾದ ಚಿಂತನೆಯಿಂದ ಸ್ವಂತ ಅಸ್ತಿತ್ವದ ಅರಿವು ಮೂಡಲಿದೆ.

 

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...