alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಲೌಕಿಕ ವಿಷಯಗಳನ್ನು ಮರೆತು ಆಧ್ಯಾತ್ಮದಲ್ಲಿ ತೊಡಗಿಕೊಳ್ಳಲಿದ್ದೀರಿ. ಆಧ್ಯಾತ್ಮಿಕ ಸಿದ್ಧಿ ಪಡೆಯುವ ಯೋಗವಿದೆ. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.

ವೃಷಭ ರಾಶಿ

ಕುಟುಂಬದವರೊಂದಿಗೆ ಸಾಮಾಜಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೀರಿ. ಹೊರಗಡೆ ಸುತ್ತಾಡಲು ತೆರಳಲಿದ್ದೀರಿ. ಸಾಮಾಜಿಕ ಜೀವನದಲ್ಲಿ ಯಶಸ್ಸು, ಕೀರ್ತಿ ದೊರೆಯುತ್ತದೆ.

ಮಿಥುನ ರಾಶಿ

ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಇಂದು ಶುಭ ದಿನ. ಮನೆಯಲ್ಲಿ ಆನಂದ, ಉಲ್ಲಾಸದ ವಾತಾವರಣವಿರುತ್ತದೆ. ಕಾರ್ಯದಲ್ಲಿ ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ.

ಕರ್ಕ ರಾಶಿ

ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಪ್ರಿಯ ವ್ಯಕ್ತಿಗಳೊಂದಿಗೆ ವಾದ-ವಿವಾದ ಉಂಟಾಗಬಹುದು. ಹೊಸ ಕಾರ್ಯದ ಆರಂಭ ಮತ್ತು ಪ್ರಯಾಣಕ್ಕೆ ಶುಭ ಸಮಯವಲ್ಲ.

ಸಿಂಹ ರಾಶಿ

ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ತಾಯಿಯೊಂದಿಗೆ ಜಗಳವಾಗಬಹುದು. ಮನೆ, ವಾಹನ ಅಥವಾ ಆಸ್ತಿ ಖರೀದಿಗೆ ಸಮಯ ಅನುಕೂಲಕರವಾಗಿಲ್ಲ.

ಕನ್ಯಾ ರಾಶಿ

ಭಾವನಾತ್ಮಕ ಸಂಬಂಧಗಳು ಮೂಡಲಿವೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ರಹಸ್ಯ ವಿದ್ಯೆಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಲಿದ್ದೀರಿ.

ತುಲಾ ರಾಶಿ

ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಹೆಚ್ಚಾಗಿರುತ್ತದೆ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ಇರಲಿ. ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹುದು.

ವೃಶ್ಚಿಕ ರಾಶಿ

ಇಂದು ನಿಮಗೆ ಶುಭ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನರಾಗಿರುತ್ತೀರಿ. ಕುಟುಂಬ ಸದಸ್ಯರೊಂದಿಗೆ ಖುಷಿಯಾಗಿ ಕಾಲ ಕಳೆಯಲಿದ್ದೀರಿ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.

ಧನು ರಾಶಿ

ನಿಮ್ಮ ಮಾತು ಮತ್ತು ನಡವಳಿಕೆ ವಿವಾದಕ್ಕೆ ಕಾರಣವಾಗಬಹುದು. ಆರೋಗ್ಯಕ್ಕಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ವ್ಯರ್ಥ ಕಾರ್ಯಗಳಿಗಾಗಿ ನಿಮ್ಮ ಶಕ್ತಿಯನ್ನು ಉಪಯೋಗಿಸಲಿದ್ದೀರಿ.

ಮಕರ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಸ್ನೇಹಿತರು, ಆತ್ಮೀಯರನ್ನು ಭೇಟಿಯಾಗಲಿದ್ದೀರಿ. ಪ್ರಿಯ ವ್ಯಕ್ತಿಗಳ ಭೇಟಿ ರೋಮಾಂಚನಕಾರಿಯಾಗಿರಲಿದೆ. ಆದಾಯ ವೃದ್ಧಿಸಲಿದೆ.

ಕುಂಭ ರಾಶಿ

ಎಲ್ಲಾ ಕೆಲಸಗಳು ಸರಳವಾಗಿ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ಪದೋನ್ನತಿ ಮತ್ತು ಧನ ಪ್ರಾಪ್ತಿ ಯೋಗವಿದೆ.

ಮೀನ ರಾಶಿ

ಶರೀರಕ್ಕೆ ಆಯಾಸದ ಅನುಭವವಾಗಲಿದೆ. ಅದೃಷ್ಟ ನಿಮ್ಮ ಜೊತೆಗಿರುವುದಿಲ್ಲ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...