alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಸಾಂಸಾರಿಕ ವಿಷಯದ ಬದಲು ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ಒಲವು ಮೂಡಲಿದೆ. ನಿಗೂಢ ವಿದ್ಯೆ ಹಾಗೂ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಮೂಡಲಿದೆ. ಅದನ್ನು ತಿಳಿಯಲು ಪ್ರಯತ್ನಿಸುತ್ತೀರಿ.

ವೃಷಭ ರಾಶಿ

ದಾಂಪತ್ಯ ಜೀವನದಲಲ್ಲಿ ಸುಖ-ಶಾಂತಿಯ ಅನುಭವವಾಗುತ್ತದೆ. ಕುಟುಂಬದವರು ಮತ್ತು ಆತ್ಮೀಯ ಸ್ನೇಹಿತರೊಂದಿಗೆ ಒಳ್ಳೆ ಭೋಜನ ಸವಿಯಲಿದ್ದೀರಿ. ಆರೋಗ್ಯವೂ ಉತ್ತಮವಾಗಿರುತ್ತದೆ.

ಮಿಥುನ ರಾಶಿ

ಅಪೂರ್ಣ ಕಾರ್ಯಗಳು ಇಂದು ಪೂರ್ಣಗೊಳ್ಳಲಿವೆ. ಸಫಲತೆ ಮತ್ತು ಯಶಸ್ಸು ಕೂಡ ದೊರೆಯಲಿದೆ. ಕಚೇರಿಯಲ್ಲಿ ಯಾರೊಂದಿಗಾದರೂ ವಾದ-ವಿವಾದ ಅಥವಾ ಜಗಳ ಉಂಟಾಗಬಹುದು.

ಕರ್ಕ ರಾಶಿ

ದಿನದ ಆರಂಬದಲ್ಲಿ ಚಿಂತೆ ಮತ್ತು ಉದ್ವೇಗ ಹೆಚ್ಚಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ.

ಸಿಂಹ ರಾಶಿ

ಮನಸ್ಸಿನಲ್ಲಿ ನಕಾರಾತ್ಮಕ ವಿಚಾರದಿಂದ ಹತಾಶೆ ಉಂಟಾಗುತ್ತದೆ. ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ತಂದೆ-ತಾಯಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು.

ಕನ್ಯಾ ರಾಶಿ

ನಿಮ್ಮಲ್ಲಿ ಪಶ್ಚಾತ್ತಾಪ ಉಂಟು ಮಾಡಬಹುದಾದ ಯಾವುದೇ ಕೆಲಸವನ್ನು ಮಾಡಬೇಡಿ. ಇಂದು ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ. ಪ್ರತಿಸ್ಪರ್ಧಿಗಳ ವಿರುದ್ಧವೂ ಗೆಲುವು ಸಿಗಲಿದೆ.

ತುಲಾ ರಾಶಿ

ನಿಮ್ಮ ಹಠಮಾರಿತನವನ್ನು ಬಿಟ್ಟು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗದ ಬಗ್ಗೆ ಹೆಚ್ಚು ಗಮನ ಕೊಡಿ. ಮಾತಿನ ಮೇಲೆ ನಿಯಂತ್ರಣ ಇರಲಿ. ಇಲ್ಲದೇ ಹೋದಲ್ಲಿ ಯಾರೊಂದಿಗಾದರೂ ಮುನಿಸು ಉಂಟಾಗಬಹುದು.

ವೃಶ್ಚಿಕ ರಾಶಿ

ಇವತ್ತು ಇಡೀ ದಿನ ಒಳ್ಳೆ ಮೂಡ್ ನಲ್ಲಿರುತ್ತೀರಾ. ಆತ್ಮೀಯರೊಂದಿಗೆ ಸುತ್ತಾಟ, ಭೂರಿ ಭೋಜನದ ಯೋಗವಿದೆ. ಆನಂದವಾಗಿ ಕಾಲ ಕಳೆಯಲಿದ್ದೀರಿ.

ಧನು ರಾಶಿ

ಇವತ್ತು ನಿಮಗೆ ಕಷ್ಟದಾಯಕವಾದ ದಿನ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಜಗಳದ ವಾತಾವರಣ ಏರ್ಪಡುತ್ತದೆ.

ಮಕರ ರಾಶಿ

ಇಂದು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರಿಗೆ ಹಾಗೂ ಉದ್ಯೋಗಿಗಳಿಗೆ ಲಾಭದಾಯಕವಾದ ದಿನ. ಸುತ್ತಾಟ ಅಥವಾ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳಬಹುದು.

ಕುಂಭ ರಾಶಿ

ವಿಘ್ನಗಳು ಎದುರಾದರೂ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ. ಇದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ಕಚೇರಿಯಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಮೀನ ರಾಶಿ

ನಕಾರಾತ್ಮಕ ಯೋಚನೆಗಳು ಬರದಂತೆ ಎಚ್ಚರ ವಹಿಸಿ. ಮಾನಸಿಕ ಅಸ್ವಸ್ಥತೆಯಿಂದ ಉದಾಸೀನತೆ ಹೆಚ್ಚಲಿದೆ. ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ನಿಮ್ಮನ್ನು ಚಿಂತೆಗೀಡು ಮಾಡಲಿವೆ.

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...