alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ರಾಶಿಯವರ ಮೇಲೆ ಶನಿದೇವನ ಕಣ್ಣು

2017_1image_09_19_014540774shanidev-ll

ಹೊಸ ವರ್ಷ ಮೊದಲ ಬಾರಿ ಜನವರಿ 26ರಂದು ಶನಿದೇವ ರಾಶಿ ಬದಲಿಸ್ತಿದ್ದಾನೆ. ಮೂರು ರಾಶಿಯವರು ಸಾಡೇ ಸಾಥ್ ಶನಿಯ ಪ್ರಭಾವಕ್ಕೊಳಗಾಗಲಿದ್ದು, ಇನ್ನೆರಡು ರಾಶಿಯ ಮೇಲೆ ಶನಿಯ ಪ್ರಭಾವವಿರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ನಿಧಾನವಾಗಿ ತನ್ನ ರಾಶಿ ಬದಲಾಯಿಸುತ್ತಾನೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ಸುಮಾರು 2 ವರ್ಷ ತೆಗೆದುಕೊಳ್ತಾನೆ.

ಶನಿ ಯಾವ ರಾಶಿಗೆ ಹೋಗ್ತಾನೋ ಆ ರಾಶಿಯ ಹಿಂದಿನ ಹಾಗೂ ಮುಂದಿನ ರಾಶಿ ಮೇಲೆ ಶನಿ ಕಣ್ಣಿಡ್ತಾನೆ. ಜನವರಿ 26ರಂದು ಧನು ರಾಶಿಯನ್ನು ಶನಿದೇವ ಪ್ರವೇಶ ಮಾಡಲಿದ್ದಾನೆ. ವೃಶ್ಚಿಕ, ಧನು, ಮಕರ ರಾಶಿಯವರು ಸಾಡೇ ಸಾತ್ ಶನಿಯ ಪ್ರಭಾವಕ್ಕೊಳಗಾಗಲಿದ್ದಾರೆ. ಕನ್ಯಾ ಹಾಗೂ ವೃಷಭ ರಾಶಿಯವರ ಮೇಲೂ ಶನಿ ಪ್ರಭಾವ ಬೀರಲಿದ್ದಾನೆ. ಉಳಿದ ರಾಶಿಯವರೂ ಎಚ್ಚರದಿಂದಿರುವುದು ಒಳ್ಳೆಯದು. ಜೊತೆಗೆ ಈ ವಿಷ್ಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.

ಶನಿಯ ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಊಟಕ್ಕೆ ಮೊದಲು ಒಂದು ತಟ್ಟೆಯಲ್ಲಿ ಮಾಡಿದ ಆಹಾರವನ್ನು ಕಾಗೆಗೆ ನೀಡಿ.

ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ದಾನವಾಗಿ ನೀಡಿ.

ರಾತ್ರಿ ಹಾಲು ಕುಡಿದು ಮಲಗಬೇಡಿ.

ಏಳನೇ ಸ್ಥಾನದಲ್ಲಿ ಶನಿಯಿದ್ದರೆ ಮದ್ಯಪಾನ ಮಾಡಬೇಡಿ. ಪ್ರತಿ ಶನಿವಾರ ವೃತ ಮಾಡಿ.

ಶನಿವಾರದಂದು ಕಪ್ಪು ಎಳ್ಳು, ಎಣ್ಣೆ ಹಾಗೂ ಕಪ್ಪು ಬಟ್ಟೆಯನ್ನು ಶನಿದೇವಸ್ಥಾನಕ್ಕೆ ಅರ್ಪಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...