alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

astro

ಮೇಷ ರಾಶಿ 

ಪ್ರಮುಖ ಕೆಲಸ ಮತ್ತು ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಲಿದ್ದೀರಿ. ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ಆದಾಯದ ಸಮಸ್ಯೆ ಎದರಾಗುವ ಸಾಧ್ಯತೆ ಇದೆ. ಕಚೇರಿಯ ಅತ್ಯವಶ್ಯ ಕೆಲಸ ಪೂರ್ಣಗೊಳ್ಳಲಿದೆ. ಕೆಲವರ ಜೊತೆಗೆ ಬಿರುಸಿನ ಮಾತುಕತೆಯಾಗಬಹುದು. ಕೆಲವೊಂದು ಸವಾಲುಗಳು ಕೂಡ ಎದುರಾಗುವ ಸಾಧ್ಯತೆ ಇದೆ.

 

ವೃಷಭ ರಾಶಿ

ಹೊಸ ಕೆಲಸ ಆರಂಭಿಸಲು ಯೋಜನೆ ಹಾಕಿಕೊಳ್ಳುತ್ತೀರಿ. ಪ್ರಮೋಷನ್ ಅಥವಾ ಹೊಸ ಉದ್ಯೋಗಕ್ಕೂ ಪ್ರಯತ್ನಿಸುತ್ತೀರಿ. ಕಠಿಣ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚಬಹುದು. ಪ್ರಯಾಣ ಯೋಗವಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಹಳೆಯ ಸಮಸ್ಯೆಗಳು ಕೂಡ ನಿಮ್ಮ ಚಿಂತೆಯನ್ನು ಹೆಚ್ಚಿಸಲಿವೆ.

ಮಿಥುನ ರಾಶಿ

ಸೂಕ್ತ ವ್ಯಕ್ತಿಯೊಂದಿಗೆ ನಿಮ್ಮ ಭೇಟಿಯಾಗಲಿದೆ. ಅವರು ಭವಿಷ್ಯದಲ್ಲಿ ನಿಮಗೆ ನೆರವಾಗುತ್ತಾರೆ. ಕೆಲಸದ ಕಡೆಗೆ ಹೆಚ್ಚು ಗಮನ ಕೊಡಿ. ಕಚೇರಿಯಲ್ಲಿ ನೀವು ಕೆಲವೊಂದು ಬದಲಾವಣೆ ಮಾಡಬೇಕಾಗಬಹುದು. ಕುಟುಂಬದಲ್ಲಿ ಹಳೆಯ ವಿವಾದವನ್ನು ಬಗೆಹರಿಸುತ್ತೀರಾ. ಅಂದುಕೊಂಡ ಕಾರ್ಯಸಿದ್ಧಿಯಲ್ಲಿ ಅಡಚಣೆಗಳು ಎದುರಾಗುತ್ತವೆ.

ಕರ್ಕ ರಾಶಿ

ನೌಕರಿಯಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಹೊಸ ಅವಕಾಶದ ಬಾಗಿಲು ತೆರೆಯಲಿದೆ. ಹಣಕಾಸಿನ ವಿಷಯದ ಬಗ್ಗೆ ಆಲೋಚನೆ ಮಾಡಿ. ಒಂದೇ ಬಾರಿ ಹಲವು ಕೆಲಸಗಳನ್ನು ಮಾಡಬೇಕಾಗಿ ಬರಬಹುದು. ಇಂದು ಸ್ವಲ್ಪ ಸಾವಧಾನದಿಂದಿರಿ, ಕೇಳದೇ ಯಾರಿಗೂ ಸಹಾಯ ಮಾಡಲು ಹೋಗಬೇಡಿ. ಅದರಿಂದ ನಿಮಗೆ ತೊಂದರೆಯಾಗಬಹುದು.

ಸಿಂಹ ರಾಶಿ

ಇವತ್ತು ನಿಮಗೆ ಧನಲಾಭ ಯೋಗವಿದೆ. ನಿಮ್ಮ ಸಹೋದ್ಯೋಗಿಗಳೇ ನಿಮ್ಮ ಆತಂಕವನ್ನು ದೂರ ಮಾಡಲಿದ್ದಾರೆ. ಯಾವುದೇ ಕೆಲಸಕ್ಕೂ ಆತುರ ಬೇಡ. ಸದ್ಯ ಇರುವ ಉದ್ಯೋಗವನ್ನು ಬಿಡಬೇಡಿ. ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು. ಯೋಚಿಸಿ ಮಾತನಾಡಿ.

ಕನ್ಯಾ ರಾಶಿ

ಸಕಾರಾತ್ಮಕ ಮಹತ್ವಾಕಾಂಕ್ಷೆ ಹೆಚ್ಚಾಗಿರುತ್ತದೆ. ವೃತ್ತಿಯಲ್ಲಿ ಯಶಸ್ಸು ಪಡೆಯಲು ಹೊಸ ದಾರಿ ಹುಡುಕಬೇಕು. ನಿಮ್ಮ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡ್ರೂ ಅದರಲ್ಲಿ ಲಾಭ ದೊರೆಯುತ್ತದೆ. ರಜೆ ಅಥವಾ ಪ್ರಯಾಣಕ್ಕೆ ಸಂಬಂಧಿಸಿದ ಸುದ್ದಿ ಸಿಗಲಿದೆ. ಯಾವ ವಿಷಯಕ್ಕೂ ಅತಿಯಾದ ಪ್ರತಿಕ್ರಿಯೆ ಬೇಡ.

ತುಲಾ ರಾಶಿ

ನಿಮ್ಮನ್ನು ಚಿಂತೆಗೀಡು ಮಾಡಿದ್ದ ಪ್ರಶ್ನೆಗೆ ಉತ್ತರ ಸಿಗಲಿದೆ. ದಿನಚರ್ಯೆಯಲ್ಲಿ ಸ್ವಲ್ಪ ಬದಲಾವಣೆ ಆಗಬಹುದು. ಸ್ನೇಹಿತರು ಮತ್ತು ಆಪ್ತರ ಜೊತೆಗೆ ಸ್ವಲ್ಪ ಸಮಯ ಕಳೆಯಿರಿ. ಕೆಲವೊಂದು ಗಂಭೀರ ಸಮಸ್ಯೆಗಳು ಎದುರಾಗಬಹುದು. ಕೋಪ ಮಾಡಿಕೊಂಡ್ರೆ ಯಾವ ಕೆಲಸವೂ ಆಗುವುದಿಲ್ಲ.

ವೃಶ್ಚಿಕ ರಾಶಿ

ಧನಾತ್ಮಕ ಕೆಲಸದ ಜೊತೆಗೆ ಹೆಚ್ಚು ಮಾಹಿತಿಯೂ ಸಿಗಲಿದೆ. ಕೆಲವು ಸಂಬಂಧಗಳಲ್ಲಿ ಸಮತೋಲನ ಕಾಪಾಡುವಲ್ಲಿ ಸಫಲರಾಗುತ್ತೀರಾ. ಕಠಿಣ ಮತ್ತು ಮಹತ್ವಪೂರ್ಣ ವಿಷಯದೆಡೆಗೆ ನಿಮ್ಮ ಗಮನ ಹರಿಯಲಿದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಯಿಂದ ಉತ್ತಮ ಸಲಹೆ ಸಿಗಲಿದೆ.

ಧನು ರಾಶಿ

ಉದ್ಯಮ ಅಥವಾ ಕೆಲಸದ ಕಡೆಗೆ ಹೆಚ್ಚು ಗಮನವಿರಲಿದೆ. ಖಾಸಗಿ ಜೀವನದಲ್ಲಿ ಬದಲಾವಣೆ ತರುವ ಬಗ್ಗೆ ಯೋಚಿಸುತ್ತೀರಾ. ಕಚೇರಿಯಲ್ಲಿ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಲಿದೆ. ಕುಟುಂಬದರೊಂದಿಗೆ ಮಹತ್ವದ ಚರ್ಚೆ ಮಾಡಲು ಇಂದು ಶುಭದಿನ. ಅನಾವಶ್ಯಕ ಖರ್ಚು ಹೆಚ್ಚುವ ಸಾಧ್ಯತೆ ಇದೆ.

ಮಕರ ರಾಶಿ

ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ನಿಮ್ಮ ಮೂಡ್ ಕೆಡಿಸುವಂತಹ ಪರಿಸ್ಥಿತಿಗಳಿಂದ ದೂರವಿರಿ. ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಮಸ್ಯೆಗಳನ್ನೆಲ್ಲ ಸಮಾಧಾನದಿಂದ ಪರಿಹರಿಸುತ್ತೀರಾ. ಹಳೆಯ ಶತ್ರು ನಿಮಗೆ ತೊಂದರೆ ಕೊಡಬಹುದು.

ಕುಂಭ ರಾಶಿ

ಹೊಸ ಉದ್ಯಮ ಆರಂಭಿಸಲು ಶುಭದಿನ. ಇವತ್ತು ಮಾಡಿಕೊಳ್ಳುವ ಬ್ಯುಸಿನೆಸ್ ಒಪ್ಪಂದದಿಂದ ಲಾಭವಾಗಲಿದೆ. ನೀವು ಅಂದುಕೊಂಡಿರುವ ಕಾರ್ಯದಲ್ಲಿ ಸಫಲತೆ ಸಿಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗುತ್ತೀರಿ. ಜಾಗರೂಕತೆಯಿಂದ ಮಾತನಾಡಿ. ಇಂದು ನಿಮ್ಮಲ್ಲಿ ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ.

ಮೀನ ರಾಶಿ

ಕಚೇರಿಯ ಕೆಲಸದಲ್ಲಿ ಸಫಲತೆ ಸಿಗಲಿದೆ. ಸ್ನೇಹಿತರಿಂದ ಸಂಪೂರ್ಣ ಸಹಕಾರ ದೊರೆಯಲಿದೆ. ಜವಾಬ್ಧಾರಿ ಹೆಚ್ಚಲಿದೆ ಜೊತೆಗೆ ಅದೃಷ್ಟವೂ ನಿಮಗೆ ಸಾಥ್ ಕೊಡಲಿದೆ. ಕಚೇರಿ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಯಬಹುದು. ಹೊಸ ಸವಾಲು ನಿಮಗೆ ಎದುರಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...