alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಹಣಕಾಸು ವ್ಯವಹಾರ ಅಥವಾ ಕೊಡು ಕೊಳ್ಳುವಿಕೆ ಮಾಡಬೇಡಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ.

ವೃಷಭ ರಾಶಿ

ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಪಾಲುದಾರಿಕೆಯಿಂದ ಲಾಭವಾಗಲಿದೆ. ಆದಾಯ ವೃದ್ಧಿಸಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಆನಂದವಿರುತ್ತದೆ.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕ ಸುಖ ದೊರೆಯುತ್ತದೆ. ಉದ್ಯೋಗದಲ್ಲಿ ಹೆಚ್ಚು ಪರಿಶ್ರಮ ಪಡಬೇಕು. ಅದಕ್ಕೆ ತಕ್ಕ ಪ್ರತಿಫಲ ಕೂಡ ದೊರೆಯುತ್ತದೆ.

ಕರ್ಕ ರಾಶಿ

ಇಂದು ಆಕಸ್ಮಿಕ ಧನಲಾಭ ದೊರೆಯುವ ಸಾಧ್ಯತೆ ಇದೆ. ವಿದೇಶಕ್ಕೆ ತೆರಳಲು ಉತ್ಸುಕರಾಗಿರುವವರಿಗೆ ಯಶಸ್ಸು ಸಿಗುತ್ತದೆ. ವಿದೇಶದಿಂದ ಶುಭ ಸಮಾಚಾರ ಬರುತ್ತದೆ.

ಸಿಂಹ ರಾಶಿ

ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಿ ಬರುತ್ತದೆ. ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ದಾಂಪತ್ಯ ಜೀವನದ ಸುಖಮಯ ಕ್ಷಣಗಳ ಅನುಭವವಾಗಲಿದೆ. ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಖ್ಯಾತಿ ಮತ್ತು ಪ್ರತಿಷ್ಠೆ ದೊರೆಯುತ್ತದೆ.

ತುಲಾ ರಾಶಿ

ಇಂದು ಆರೋಗ್ಯ ಉತ್ತಮವಾಗಿರುತ್ತದೆ. ಮನಸ್ಸು ಕೂಡ ಶಾಂತವಾಗಿರುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದೆ.

ವೃಶ್ಚಿಕ ರಾಶಿ

ಇಂದು ಯಾತ್ರೆ ಅಥವಾ ಪ್ರವಾಸವನ್ನು ಆಯೋಜನೆ ಮಾಡಲು ಉತ್ತಮ ದಿನ. ಆರೋಗ್ಯ ಕೊಂಚ ಏರುಪೇರಾಗಬಹುದು, ಅದರಿಂದ ಚಿಂತಿತರಾಗುತ್ತೀರಿ.

ಧನು ರಾಶಿ

ಇಂದು ಹೆಚ್ಚು ಸಂವೇದನಾಶೀಲರಾಗಿರುತ್ತೀರಾ. ಇದರಿಂದಾಗಿ ಕೌಟುಂಬಿಕ ಸಮಸ್ಯೆಗಳು ಉದ್ಭವಿಸುತ್ತವೆ. ಇದೇ ಕಾರಣಕ್ಕೆ ಮನಸ್ಸಿನಲ್ಲಿ ಆತಂಕ ಮೂಡಬಹುದು.

ಮಕರ ರಾಶಿ

ನಿಮ್ಮ ರಣತಂತ್ರಗಳ ಮೂಲಕ ವಿರೋಧಿಗಳನ್ನು ಮಣಿಸುತ್ತೀರಿ. ಹೊಸ ಕಾರ್ಯವನ್ನು ಆರಂಭಿಸಲು ರೆಡಿಯಾಗಿರಿ. ಅದರಲ್ಲಿ ಯಶಸ್ಸು ಕೂಡ ಸಿಗುತ್ತದೆ.

ಕುಂಭ ರಾಶಿ

ಮನಸ್ಸು ಗೊಂದಲಮಯವಾಗಿರುತ್ತದೆ. ಯಾವುದೇ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಚೆನ್ನಾಗಿ ಆಲೋಚಿಸಿ.

ಮೀನ ರಾಶಿ

ಹೊಸ ಕಾರ್ಯ ಕೈಗೆತ್ತಿಕೊಂಡರೆ ಅದರಲ್ಲಿ ಯಶಸ್ಸು ಸಿಗುತ್ತದೆ. ಧಾರ್ಮಿಕ ಮತ್ತು ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಭೂರಿ ಭೋಜನ ಸವಿಯುವ ಅವಕಾಶ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...