alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಸಾಮಾಜಿಕ ವ್ಯಕ್ತಿಗಳು, ಸ್ನೇಹಿತರು, ಮಂತ್ರಿಗಳ ಜೊತೆ ನಿಮ್ಮ ಸಂಬಂಧ ಸುಖಕರವಾಗಿರಲಿದೆ. ಸ್ನೇಹಿತರ ಕಾರಣಕ್ಕೆ ಹಣ ಖರ್ಚಾಗಲಿದೆ. ಜೊತೆಗೆ ಲಾಭವೂ ಆಗಲಿದೆ. ಸರ್ಕಾರಿ ಹಾಗೂ ಅರೆ ಸರಕಾರಿ ಕಾರ್ಯದಲ್ಲಿ ಶುಭವಾಗಲಿದೆ.

ವೃಷಭ ರಾಶಿ

ಹೊಸ ಕಾರ್ಯಗಳನ್ನು ಆರಂಭಿಸಲು ಗಣೇಶ ನಿಮಗೆ ಅನುಕೂಲವಾಗಿದ್ದಾನೆ. ನೌಕರಿ ಹಾಗೂ ವ್ಯವಸಾಯದಲ್ಲಿ ಲಾಭವಾಗಲಿದೆ. ಪ್ರಚಾರ ಸಿಗಲಿದೆ. ವ್ಯಾಪಾರದಲ್ಲಿ ಹೊಸ ದಾರಿ ಸಿಗಲಿದೆ. ಮನೋಯಿಚ್ಛೆ ನೆರವೇರಲಿದೆ. ನಿಂತಿದ್ದ ಕಾರ್ಯ ಪೂರ್ಣಗೊಳ್ಳಲಿದೆ.

ಮಿಥುನ ರಾಶಿ

ಈ ದಿನ ನಿಮ್ಮ ಕೆಲಸಗಳು ವಿಳಂಬವಾಗಲಿವೆ. ದೇಹದಲ್ಲಿ ಬಲ ಕಡಿಮೆಯಾಗಿ ಉತ್ಸಾಹದ ಕೊರತೆ ಕಾಣಲಿದೆ. ಹೊಟ್ಟೆಯ ಸಮಸ್ಯೆ ಕಾಡಲಿದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಅನುಭವಿಸುವಿರಿ. ಪ್ರಮುಖ ಹಾಗೂ ನಿರ್ಧರಿತ ಕಾರ್ಯಗಳನ್ನು ಇಂದು ಮುಂದೂಡುವುದು ಒಳ್ಳೆಯದು.

ಕರ್ಕ ರಾಶಿ

ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿ ನಿಮ್ಮನ್ನು ಹತಾಶೆಗೊಳಿಸಲಿದೆ. ಹೊರಗಿನ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಕೋಪವನ್ನು ನಿಯಂತ್ರಣದಲ್ಲಿಡುವುದು ಒಳ್ಳೆಯದು.

ಸಿಂಹ ರಾಶಿ

ಪತಿ-ಪತ್ನಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಸಂಸಾರಿಕ ವಿಚಾರದಲ್ಲಿ ಉದಾಸೀನತೆ ಕಾಡಲಿದೆ.

ಕನ್ಯಾ ರಾಶಿ

ಶಾರೀರಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ವೃದ್ಧಿ. ಮನೆಯಲ್ಲಿ ಸುಖ-ಶಾಂತಿಯ ವಾತಾವರಣ ನೆಲೆಸಿರಲಿದೆ. ಆರ್ಥಿಕ ಲಾಭ ಹಾಗೂ ಕೆಲಸದಲ್ಲಿ ಯಶಸ್ಸು ಸಿಗಲಿದೆ.

ತುಲಾ ರಾಶಿ

ಸಂತಾನದಲ್ಲಿ ಪ್ರಗತಿ. ಈ ದಿನ ರೋಮಾಂಚಕಾರಿಯಾಗಿರಲಿದೆ. ತನು-ಮನ ಉಲ್ಲಾಸಭರಿತವಾಗಿರಲಿದೆ.

ವೃಶ್ಚಿಕ ರಾಶಿ

ಶಾರೀರಿಕ ಹಾಗೂ ಮಾನಸಿಕವಾಗಿ ಭಯ ಕಾಡಲಿದೆ. ಒಂದಲ್ಲ ಒಂದು ಸಮಸ್ಯೆ ನಿಮ್ಮನ್ನು ಕಾಡಲಿದೆ. ಮನಸ್ಸಿನ ಶಾಂತಿ ಹಾಳಾಗಲಿದೆ.

ಧನು ರಾಶಿ

ಹೊಸ ಕಾರ್ಯ ಶುರುಮಾಡಲು ಇದು ಶುಭ ದಿನ. ಸ್ನೇಹಿತರು, ಸಂಬಂಧಿಕರಿಂದ ಸುಖ-ಶಾಂತಿ ಸಿಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ನಕಾರಾತ್ಮಕ ಚಿಂತೆ ದೂರ ಮಾಡಿದ್ರೆ ಮನಸ್ಸು ಶಾಂತವಾಗಲಿದೆ.

ಮಕರ ರಾಶಿ

ಮಾತು ಹಾಗೂ ವ್ಯವಹಾರದಲ್ಲಿ ಸಂಯಮ ವಹಿಸುವ ಅಗತ್ಯವಿದೆ. ವ್ಯವಹಾರದಲ್ಲಿ ಆರ್ಥಿಕ ಲಾಭವಾಗಲಿದೆ. ಕಣ್ಣುಗಳ ಸಮಸ್ಯೆ ಕಾಡಲಿದೆ.

ಕುಂಭ ರಾಶಿ

ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರಿಂದ ಹಬ್ಬದ ವಾತಾವರಣ ಮನೆ ಮಾಡಲಿದೆ. ಶಿಕ್ಷಣದಲ್ಲಿ ಪ್ರಗತಿ ಕಾಣಲಿದೆ. ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಆಧ್ಯಾತ್ಮಿಕತೆ ಮತ್ತು ಧ್ಯಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ಮೀನ ರಾಶಿ

ಏಕಾಗ್ರತೆ ಕಡಿಮೆಯಾಗಲಿದೆ. ಕಿರಿಕಿರಿ ಅನುಭವಿಸುವಿರಿ. ಸ್ನೇಹಿತರ-ಸಂಬಂಧಿಕರ ನಡುವೆ ಭಿನ್ನಾಭಿಪ್ರಾಯ ಮನೆ ಮಾಡಲಿದೆ. ನ್ಯಾಯಾಲಯದ ಪ್ರಕರಣದಿಂದ ದೂರವಿರುವುದು ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...