alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಖರ್ಚಿನ ಚಿಂತೆಯಿಂದ ಮನಸ್ಸು ಅಶಾಂತಗೊಳ್ಳಬಹುದು. ಮಾತಿನ ಮೇಲೆ ಹಿಡಿತವಿರಲಿ. ಹೊರಗಡೆ ಊಟ-ಉಪಹಾರ ಮಾಡಬೇಡಿ.

ವೃಷಭ ರಾಶಿ

ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಅದರಲ್ಲೂ ಕಣ್ಣುಗಳಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಕೆಲವೊಂದು ಅಹಿತಕರ ಘಟನೆಗಳು ಸಂಭವಿಸಬಹುದು.

ಮಿಥುನ ರಾಶಿ

ಆನಂದ ಮತ್ತು ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ಉದ್ಯಮದಲ್ಲಿ ಲಾಭವಾಗಲಿದೆ ಮತ್ತು ಆದಾಯ ಕೂಡ ವೃದ್ಧಿಸುವ ಸಾಧ್ಯತೆ ಇದೆ. ಸ್ನೇಹಿತರ ಭೇಟಿ ಮನಸ್ಸಿಗೆ ಖುಷಿ ಕೊಡಲಿದೆ.

ಕರ್ಕ ರಾಶಿ

ಇವತ್ತು ಆತ್ಮವಿಶ್ವಾಸದಿಂದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲಿದ್ದೀರಿ. ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಪದೋನ್ನತಿಯ ಸಾಧ್ಯತೆಗಳಿವೆ. ತಂದೆಯ ಸಂಪತ್ತಿನಿಂದ ಲಾಭವಾಗಲಿದೆ.

ಸಿಂಹ ರಾಶಿ

ಇವತ್ತು ನಿಮಗೆ ಶುಭದಿನ. ಧಾರ್ಮಿಕ ಕಾರ್ಯ ಮತ್ತು ಪ್ರವಾಸಕ್ಕೆ ಸಮಯ ಅನುಕೂಲಕರವಾಗಿದೆ. ಸ್ತ್ರೀ ಮಿತ್ರರಿಂದ ಲಾಭವಿದೆ. ಸ್ನೇಹಿತರ ಭೇಟಿ ಮನಸ್ಸಿಗೆ ಖುಷಿ ಕೊಡಲಿದೆ.

ಕನ್ಯಾ ರಾಶಿ

ಮಾತಿನ ಮೇಲೆ ಸಂಯಮವಿರಲಿ. ಸರ್ಕಾರ ವಿರೋಧಿ ಪ್ರವೃತ್ತಿ, ಕೋಪ ಮತ್ತು ಕಾಮ ವ್ಯಕ್ತಿತ್ವದಿಂದ ದೂರವಿರುವುದು ಒಳಿತು. ಹೊಸ ಸಂಬಂಧಗಳು ಅನಿಷ್ಠಕಾರಕವಾಗಬಹುದು.

ತುಲಾ ರಾಶಿ

ಇಂದು ಸಾಮಾನ್ಯ ದೈನಂದಿನ ಕೆಲಸಗಳನ್ನು ಮರೆತು ಮೋಜು-ಮಸ್ತಿಯಲ್ಲಿ ತೊಡಗಿಕೊಳ್ಳಲಿದ್ದೀರಿ. ಮನರಂಜನಾ ಸ್ಥಳ ಅಥವಾ ಪಿಕ್ನಿಕ್ ಗೆ ತೆರಳುವ ಸಾಧ್ಯತೆ ಇದೆ. ಇದರಿಂದ ಮನಸ್ಸು ಪ್ರಸನ್ನವಾಗಲಿದೆ.

ವೃಶ್ಚಿಕ ರಾಶಿ

ಇವತ್ತಿನ ದಿನ ಅತ್ಯಂತ ಹರ್ಷೋಲ್ಲಾಸದಾಯಕವಾಗಿರಲಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಇದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.

ಧನು ರಾಶಿ

ನಿರ್ಣಯ ತೆಗೆದುಕೊಳ್ಳಲು ಹಿಂದೇಟು ಹಾಕುತ್ತೀರಿ. ಇದರಿಂದ ಮನಸ್ಸು ಚಿಂತಾಗ್ರಸ್ಥವಾಗಲಿದೆ. ಆರೋಗ್ಯದ ವಿಷಯದಲ್ಲೂ ಚಿಂತೆ ಆವರಿಸಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಕೋಪವನ್ನು ಎದುರಿಸಬೇಕಾಗುತ್ತದೆ.

ಮಕರ ರಾಶಿ

ಮನಸ್ಸು ಅತ್ಯಂತ ಸಂವೇದನಾಶೀಲವಾಗಿರಲಿದೆ. ಮಾನಸಿಕ ಅಸ್ವಸ್ಥತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಯಶಸ್ಸು ಸಿಗಲಿದೆ. ಇವತ್ತು ಎಲ್ಲಾ ಕಾರ್ಯಗಳೂ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಕುಂಭ ರಾಶಿ

ಅತ್ಯವಶ್ಯ ನಿರ್ಣಯ ತೆಗೆದುಕೊಳ್ಳಲು ಇಂದು ಉತ್ತಮ ದಿನ. ನಿಮ್ಮ ಸೃಜನಾತ್ಮಕ ಶಕ್ತಿ ವೃದ್ಧಿಸಲಿದೆ. ವೈಚಾರಿಕತೆ ಮತ್ತು ಮಾನಸಿಕ ಸ್ಥಿರತೆಯಿಂದ ಕೆಲಸ ಸರಳವಾಗಲಿದೆ. ಸಂಗಾತಿಯಿಂದ ಸಂಪೂರ್ಣ ಸಹಯೋಗ ದೊರೆಯಲಿದೆ.

ಮೀನ ರಾಶಿ

ಹದಗೆಟ್ಟಿರುವ ಸಂಬಂಧ ಸುಧಾರಿಸಲು ಮತ್ತು ಮುನಿಸಿಕೊಂಡವರ ಮನವೊಲಿಸಲು ಸೂಕ್ತ ಸಮಯ. ವೃತ್ತಿಯಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕಠಿಣ ಪರಿಸ್ಥಿತಿಗಳು ಎದುರಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...