alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮಗೆ ಶುಭ ದಿನ. ಸ್ನೇಹಿತರು, ಆತ್ಮೀಯರು ಮತ್ತು ಬಂಧುಗಳೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಮಿತ್ರರಿಂದ ಲಾಭವಾಗಲಿದೆ. ಅದರ ಜೊತೆಜೊತೆಗೆ ಅವರಿಗಾಗಿ ಹಣ ಖರ್ಚು ಮಾಡಬೇಕಾಗಿ ಬರುತ್ತದೆ.

ವೃಷಭ ರಾಶಿ

ಇವತ್ತಿನ ದಿನ ಉತ್ತಮವಾಗಿ ಕಳೆಯಲಿದೆ. ಹೊಸ ಕಾರ್ಯವನ್ನು ಆಯೋಜನೆ ಮಾಡಲಿದ್ದೀರಿ. ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ದಿನ ಅನುಕೂಲಕರವಾಗಿದೆ. ಹಿರಿಯ ಅಧಿಕಾರಿಗಳ ಕೃಪೆ ಇರಲಿದೆ.

ಮಿಥುನ ರಾಶಿ

ಇಂದು ಮಾನಸಿಕ ದ್ವಂದ್ವಗಳು ಕಾಡುವ ಸಾಧ್ಯತೆ ಇದೆ. ಶಾರೀರಿಕವಾಗಿಯೂ ಆಯಾಸ ಕಾಣಿಸಿಕೊಳ್ಳಲಿದೆ. ಒಂದು ರೀತಿಯ ಆಲಸ್ಯ ಮನೋಭಾವದಿಂದಾಗಿ ಅಂದುಕೊಂಡ ಕಾರ್ಯಗಳು ಕೈಗೂಡುವುದಿಲ್ಲ.

ಕರ್ಕ ರಾಶಿ

ಇವತ್ತಿನ ದಿನ ಪ್ರತಿಕೂಲತೆಯಿಂದ ಕೂಡಿರುತ್ತದೆ. ಹಾಗಾಗಿ ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ಯಾವುದೇ ರೀತಿಯ ಮಸಾಜ್, ತಲೆಶೂಲೆಗೆ ಚಿಕಿತ್ಸೆಯನ್ನು ಇಂದು ಮಾಡಿಸಿಕೊಳ್ಳಬೇಡಿ.

ಸಿಂಹ ರಾಶಿ

ಇವತ್ತು ಮಿಶ್ರ ಫಲವಿದೆ. ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಬಹುದು. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಇವತ್ತು ಅತ್ಯಂತ ಸಮಾಧಾನ ಚಿತ್ತದಿಂದಿರಿ.

ಕನ್ಯಾ ರಾಶಿ

ಇವತ್ತು ನಿಮಗೆ ಶುಭ ದಿನ. ಮನೆಯಲ್ಲಿ ಸುಖ-ಶಾಂತಿಯ ವಾತಾವರಣವಿರುತ್ತದೆ. ಮನಸ್ಸು ಕೂಡ ಪ್ರಸನ್ನವಾಗಿರುತ್ತದೆ. ಸುಖಕರ ಘಟನೆಗಳು ನಡೆಯುತ್ತವೆ. ಆರೋಗ್ಯದಲ್ಲಿ ಸಮಸ್ಯೆ ಇಲ್ಲ.

ತುಲಾ ರಾಶಿ

ಇಂದು ಸುಖವಾಗಿ ದಿನ ಕಳೆಯಲಿದ್ದೀರಿ. ಬೌದ್ಧಿಕ ಕಾರ್ಯಗಳು ಮತ್ತು ಚರ್ಚೆಯಲ್ಲಿ ದಿನ ಕಳೆಯುವ ಸಾಧ್ಯತೆ ಇದೆ. ಕಲ್ಪನಾ ಶಕ್ತಿ ಮತ್ತು ಸೃಜನಾತ್ಮಕ ಶಕ್ತಿಯನ್ನು ಉಪಯೋಗಿಸಿಕೊಳ್ಳಲು ಸಫಲರಾಗುತ್ತೀರಿ.

ವೃಶ್ಚಿಕ ರಾಶಿ

ಇವತ್ತಿನ ದಿನವನ್ನು ಅತ್ಯಂತ ಶಾಂತವಾಗಿ ಕಳೆಯಲಿದ್ದೀರಿ. ಮನಸ್ಸು ಚಿಂತ್ರಾಗ್ರಸ್ಥವಾಗಿರುವ ಸಾಧ್ಯತೆಗಳಿವೆ. ಹತ್ತಿರದ ಸಂಬಂಧಿಕರೊಂದಿಗೆ ಕಲಹ ಅಥವಾ ಭಿನ್ನಾಭಿಪ್ರಾಯ ಉಂಟಾಗುವ ಸಂಭವ ಇದೆ.

ಧನು ರಾಶಿ

ಇಂದು ಗೂಢ ರಹಸ್ಯದ ಬಗ್ಗೆ ಆಸಕ್ತಿ ತಳೆಯಲಿದ್ದೀರಿ. ಆಧ್ಯಾತ್ಮಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೀರಿ. ಬಂಧುಗಳೊಂದಿಗೆ ವ್ಯವಹಾರ ಉತ್ತಮವಾಗಿರುತ್ತದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ.

ಮಕರ ರಾಶಿ

ಇಂದು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲಿದ್ದೀರಿ. ಆಕಸ್ಮಿಕ ಧನ ಲಾಭವಾಗಲಿದೆ. ಕುಟುಂಬದವರೊಂದಿಗಿನ ವಿವಾದದಿಂದಾಗಿ ಗೃಹಸ್ಥ ಜೀವನಕ್ಕೆ ಅಡ್ಡಿಯಾಗಬಹುದು. ಗೃಹಿಣಿಯರಿಗೆ ಅಸಂತೋಷ ಉಂಟಾಗುತ್ತದೆ.

ಕುಂಭ ರಾಶಿ

ಇವತ್ತು ನೀವು ಶಾರೀರಿಕ ಮತ್ತು ಮಾನಸಿಕವಾಗಿ ಉತ್ಸಾಹದಿಂದಿರುತ್ತೀರಿ. ಆರ್ಥಿಕ ರೂಪದಿಂದ್ಲೂ ಇವತ್ತಿನ ದಿನ ಲಾಭದಾಯಕವಾಗಿದೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸುತ್ತಾಡಲು ತೆರಳಲಿದ್ದೀರಿ.

ಮೀನ ರಾಶಿ

ಇಂದು ಮಾನಸಿಕ ವ್ಯಾಕುಲತೆ ಹೆಚ್ಚಾಗಿರುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ. ಕುಟುಂಬದವರಿಂದ ಇಂದು ದೂರವೇ ಇರಿ. ಯಾಕಂದ್ರೆ ಅವರೊಂದಿಗೆ ಜಗಳ ಏರ್ಪಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...