alex Certify
ಕನ್ನಡ ದುನಿಯಾ       Mobile App
       

Kannada Duniya

ಚಾತುರ್ಮಾಸದ 4 ತಿಂಗಳು ಮಾಡಬೇಡಿ ಈ ಕೆಲಸ

chaturmasya-vrat

ಜುಲೈ 9ರಿಂದ ಚಾತುರ್ಮಾಸ ಶುರುವಾಗಲಿದೆ. ಚಾತುರ್ಮಾಸ ಸೆಪ್ಟೆಂಬರ್ 6 ರವರೆಗಿರಲಿದೆ. ಇದ್ರಲ್ಲಿ ಶ್ರಾವಣ, ಭಾದ್ರಪದ, ಆಶ್ಲೀಶ ಹಾಗೂ ಕಾರ್ತೀಕ ಮಾಸಗಳು ಬರಲಿವೆ. ಅಂದ್ರೆ ಈ ನಾಲ್ಕು ತಿಂಗಳು ಯಾವುದೇ ಶುಭ ಹಾಗೂ ಮಂಗಳ ಕಾರ್ಯ ಮಾಡುವಂತಿಲ್ಲ.

ವಾಸ್ತವವಾಗಿ ಚಾತುರ್ಮಾಸದಲ್ಲಿ ಭಗವಂತ ವಿಷ್ಣು ನಿದ್ರೆಗೆ ಜಾರುತ್ತಾನೆಂಬ ನಂಬಿಕೆಯಿದೆ. ಆಷಾಢ ಪೂರ್ಣಿಮೆಗೆ ಮಲಗುವ ವಿಷ್ಣು ಭಾದ್ರಪದ ಪೂರ್ಣಿಮೆಯಂದು ನಿದ್ರೆಯಿಂದ ಏಳಲಿದ್ದಾನೆ. ಹಾಗಾಗಿ ಜುಲೈ 9ರಿಂದ ನಾಲ್ಕು ತಿಂಗಳು ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಈ ನಾಲ್ಕು ತಿಂಗಳು ಮದುವೆಗೂ ಮುಹೂರ್ತವಿಲ್ಲ.

ಭಗವಂತ ವಿಷ್ಣು ನಿದ್ರೆ ಮಾಡ್ತಿದ್ದಂತೆ ಭಗವಂತ ಶಿವ ಸೃಷ್ಟಿಯನ್ನು ನಡೆಸುತ್ತಾನೆ. ಚಾತುರ್ಮಾಸದಲ್ಲಿ ಶಿವ ಮಹಾಪುರಾಣ, ಭಾಗ್ವತ್ ಕಥೆಯನ್ನು ಓದಿದ್ರೆ ವಿಶೇಷ ಫಲ ಲಭಿಸಲಿದೆ.

ಭಾದ್ರಪದ ಮಾಸದಲ್ಲಿ ಮೊಸರು ಹಾಗೂ ಆಶ್ವೀಜ ತಿಂಗಳಿನಲ್ಲಿ ಹಾಲನ್ನು ಸೇವಿಸಬಾರದು.

ಕಾರ್ತೀಕ ಮಾಸದಲ್ಲಿ ಕಾಳುಗಳ ಸೇವನೆಯನ್ನು ನಿಷೇಧಿಸಲಾಗಿದೆ.

ಈ ನಾಲ್ಕು ತಿಂಗಳಲ್ಲಿ ಯಾವುದೇ ಕೆಟ್ಟ ಕೆಲಸಗಳನ್ನು ಮಾಡಬಾರದು.

ದೇಹಕ್ಕೆ ಎಣ್ಣೆಯನ್ನು ಹಚ್ಚಬಾರದು. ಹಾಗೆ ಕಂಚಿನ ಪಾತ್ರೆಯಲ್ಲಿ ಆಹಾರ ಸೇವನೆ ಮಾಡಬಾರದು.

ಮಾಂಸ ಹಾಗೂ ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಬೇಕು.

ಮದುವೆಯನ್ನು ಮಾಡಬಾರದು. ಹಾಗೆ ಬ್ರಹ್ಮಚರ್ಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...