alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುದ್ದಿ ಓದಿದ್ರೆ ಅಚ್ಚರಿಗೊಳಗಾಗ್ತೀರಿ…!

ನೀವು ಯಾವುದೇ ಹುಡುಗಿಯ ಜೊತೆ ಮದುವೆಯಾಗಿ, ಆಕೆ ಇಲ್ಲಿಯವರೆಗೆ ಕುವರಿಯಾಗಿರಲಿ, ಆಕೆಗೆ ಇದೇ ಮೊದಲ ಮದುವೆಯಾಗಿರಲಿ. ಆದ್ರೂ ನೀವು ನಿಮ್ಮ ಹೆಂಡತಿಗೆ ನಾಲ್ಕನೆ ಪತಿ. ಅಂದ್ರೆ ನಿಮ್ಮ ಪತ್ನಿಗೆ ನಿಮಗಿಂತ ಮೊದಲೇ ಮೂವರು ಗಂಡಂದಿರಿದ್ದಾರೆ.

ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಎಲ್ಲರ ಜೀವನದಲ್ಲೂ ಇದು ಹೇಗೆ ಸಾಧ್ಯ ಎಂಬ ಚಿಂತೆ ಕಾಡಬಹುದು. ಮೊದಲ, ಎರಡನೇಯ ಹಾಗೂ ಮೂರನೇಯ ಪತಿ ಯಾರು ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಎಲ್ಲದಕ್ಕೂ ಉತ್ತರ ಇಲ್ಲಿದೆ.

ವಾಸ್ತವವಾಗಿ ನೀವು ಮದುವೆ ವೇಳೆ ಸಂಬಂಧಿಕರ ಜೊತೆ ಮಾತನಾಡ್ತಾ ಇರುತ್ತೀರಿ. ಪುರೋಹಿತರು ಮಂತ್ರದಲ್ಲಿಯೇ ನಿಮ್ಮ ಪತ್ನಿಯಾಗುವವಳಿಗೆ ಮೂರು ಮದುವೆ ಮಾಡಿ ಮುಗಿಸಿರುತ್ತಾರೆ. ವೈದಿಕ ಪರಂಪರೆ ಪ್ರಕಾರ ಸ್ತ್ರೀಯಾದವಳು ನಾಲ್ಕು ಮದುವೆಯಾಗಬಹುದು. ಹಾಗಾಗಿಯೇ ದ್ರೌಪತಿ ಒಂದಕ್ಕಿಂತ ಹೆಚ್ಚು ಗಂಡಂದಿರೊಂದಿಗೆ ವಾಸವಾಗಿದ್ದಳು. ಇದನ್ನು ಜಾರಿಯಲ್ಲಿಡಲು ಹಾಗೂ ಸ್ತ್ರೀಯನ್ನು ಸದಾ ಪತಿವ್ರತೆಯಾಗಿರಿಸಲು ಮಂತ್ರದಲ್ಲಿಯೇ ಮೂರು ಮದುವೆ ಮಾಡಿ ಮುಗಿಸಲಾಗುತ್ತದೆ. ಮೊದಲು ಚಂದ್ರನ ಜೊತೆ ಮದುವೆ ಮಾಡಲಾಗುತ್ತದೆ. ಎರಡನೇ ಪತಿ ವಿಶ್ವವಸು. ಕನ್ಯೆಯ ಮೇಲೆ ಮೂರನೇ ಹಕ್ಕು ಅಗ್ನಿಗಿರುತ್ತದೆ. ನಾಲ್ಕನೆಯ ಹಕ್ಕು ಮಂಟಪದಲ್ಲಿ ಕೈ ಹಿಡಿದ ಗಂಡನಿಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...