alex Certify
ಕನ್ನಡ ದುನಿಯಾ       Mobile App
       

Kannada Duniya

ಆಷಾಢ ಮಾಸದಲ್ಲಿ ಯಾವ ದೇವರನ್ನು ಪೂಜಿಸಿದ್ರೆ ಯಾವ ಫಲ?

ಹಿಂದೂ ಧರ್ಮದ ನಾಲ್ಕನೇ ತಿಂಗಳು ಆಷಾಢ ಮಾಸ. ಈ ತಿಂಗಳಲ್ಲಿ ವರ್ಷ ಋತುವಿನ ಆರಂಭವಾಗುತ್ತದೆ. ಈ ತಿಂಗಳಲ್ಲಿ ರೋಗಗಳ ಸೋಂಕು ಬಹುಬೇಕ ಹರಡುತ್ತದೆ. ಈ ತಿಂಗಳಲ್ಲಿ ವಾತಾವರಣ ತೇವವಾಗಿರುತ್ತೆ.

ಆಷಾಢ ಮಾಸದಲ್ಲಿ ಗುರುವಿನ ಪೂಜೆ ಹೆಚ್ಚು ಫಲ ನೀಡುತ್ತದೆ. ಇದ್ರ ಜೊತೆಗೆ ದೇವಿ ಪೂಜೆ ಕೂಡ ಮಂಗಳಕರ. ಶ್ರೀ ಹರಿ ವಿಷ್ಣುವಿನ ಪೂಜೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಜಲ ದೇವನ ಆರಾಧನೆ ಮಾಡಿದ್ರೆ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ. ಈ ತಿಂಗಳು ಮಂಗಳ ಹಾಗೂ ಸೂರ್ಯನ ಪೂಜೆಯನ್ನು ಅವಶ್ಯವಾಗಿ ಮಾಡಬೇಕು.

ಈ ತಿಂಗಳಿನಲ್ಲಿ ನೀರಿರುವ ಹಣ್ಣುಗಳ ಸೇವನೆ ಮಾಡಬೇಕು. ಆಷಾಢ ಮಾಸದಲ್ಲಿ ಬೇಲ್ ಹಣ್ಣನ್ನು ತಿನ್ನಬಾರದು. ಆದಷ್ಟು ಎಣ್ಣೆಯುಕ್ತ ಪದಾರ್ಥಗಳ ಸೇವನೆಯನ್ನು ಮಾಡಬಾರದು. ಸೋಂಪು, ಹಿಂಗು ಹಾಗೂ ನಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು.

ಈ ತಿಂಗಳು ಶ್ರೀಹರಿ ವಿಷ್ಣು ನಿದ್ರೆಗೆ ಜಾರುತ್ತಾನೆ. ಹಾಗಾಗಿ ನಾಲ್ಕು ತಿಂಗಳುಗಳ ಕಾಲ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...