alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಖರೀದಿ ಮಾಡುವ ಮೊದಲು ಇದು ಗಮನದಲ್ಲಿರಲಿ

ನಿಮ್ಮ ಮನೆ ಹಾಗೂ ಸುತ್ತಮುತ್ತಲಿರುವ ವಸ್ತುಗಳು ನಿಮ್ಮನ್ನು ಧನವಂತನನ್ನಾಗಿ ಮಾಡುವ ಇಲ್ಲವೆ ಬಡವರನ್ನಾಗಿ ಮಾಡುವ ಶಕ್ತಿ ಹೊಂದಿರುತ್ತದೆ. ಹಾಗಾಗಿ ಮನೆ ಖರೀದಿ ಮಾಡುವ ಮೊದಲು ಕೆಲವೊಂದು ವಾಸ್ತು ಶಾಸ್ತ್ರದ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ಮನೆ ಅಥವಾ ಫ್ಲಾಟ್ ಖರೀದಿ ಮಾಡುವ ಮೊದಲು ಮನೆಯ ಮುಖ್ಯ ದ್ವಾರ ಪೂರ್ವ ಈಶಾನ್ಯ, ಉತ್ತರ ಈಶಾನ್ಯ, ದಕ್ಷಿಣ ಆಗ್ನೇಯ, ದಕ್ಷಿಣ ಆಗ್ನೇಯ ಅಥವಾ ಪಶ್ಚಿಮ ವಾಯುವ್ಯದಲ್ಲಿದೆಯೇ ಎಂಬುದನ್ನು ಪರಿಶೀಲಿಸಿ.

ಮನೆಯ ದ್ವಾರದ ಮುಂದೆ ಕರೆಂಟ್ ಕಂಬ, ಮರ ಹಾಗೂ ಮಂದಿರ ಇರದಂತೆ ನೋಡಿಕೊಳ್ಳಿ.

ಮನೆಯ ಮುಖ್ಯ ಪ್ರದೇಶದಲ್ಲಿ ಅಥವಾ ಮುಖ್ಯ ದ್ವಾರದ ಮುಂದೆ ಶೌಚಾಲಯ ಇರಬಾರದು. ಹಾಗಾಗಿ ಮನೆ ಖರೀದಿ ಮಾಡುವ ಮೊದಲು ಇದು ಗಮನದಲ್ಲಿರಲಿ.

ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಬಾಲ್ಕನಿ ಇದ್ದರೆ ಅದು ಶುಭ.

ಮುಖ್ಯ ದ್ವಾರದ ಬಾಗಿಲು ಒಳಗಡೆ ತೆರೆಯುವಂತಿರಬೇಕು.

ಅಡುಗೆ ಮನೆ ಈಶಾನ್ಯ ದಿಕ್ಕಿನಲ್ಲಿರಬಾರದು.

ಎಲ್ ಅಥವಾ ಸಿ ಆಕಾರದ ಮನೆಯನ್ನು ಎಂದೂ ಖರೀದಿ ಮಾಡಬೇಡಿ.

ದೇವರ ಮನೆ ಬೆಡ್ ರೂಮಿನಲ್ಲಿರದಂತೆ ನೋಡಿಕೊಳ್ಳಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...