alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಲ್ಗುಣ ಅಮವಾಸ್ಯೆಯಂದು ಮಾಡಿ ಈ ಕೆಲಸ

ಫೆಬ್ರವರಿ 15 ರಂದು ಪಾಲ್ಗುಣ ಅಮವಾಸ್ಯೆ ಬಂದಿದೆ. ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡಿ ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪಾಲ್ಗುಣ ಅಮವಾಸ್ಯೆಯನ್ನು ಮಹತ್ವದ ದಿನವೆಂದು ಪರಿಗಣಿಸಲಾಗಿದೆ.

ಪಾಲ್ಗುಣ ಅಮವಾಸ್ಯೆಯಂದು ದೇವಾನುದೇವತೆಗಳು ಸಂಗಮ ಸ್ಥಳಕ್ಕೆ ಬರ್ತಾರೆಂಬ ನಂಬಿಕೆಯಿದೆ. ಗಂಗಾ, ಯಮುನಾ, ಸರಸ್ವತಿ ಸಂಗಮ ಸ್ಥಳದಲ್ಲಿ ಸ್ನಾನ ಮಾಡಿದ್ರೆ ದೇವರ ಆಶೀರ್ವಾದ ಸಿಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಸಾಧ್ಯವಾದಲ್ಲಿ ಈ ದಿನ ಸಿಹಿಯನ್ನು ತಿನ್ನಬೇಕು. ಭಗವಂತ ವಿಷ್ಣುವಿನ ಆರಾಧನೆ ಮಾಡಬೇಕು. ಭಗವಂತ ವಿಷ್ಣುವಿನ ಮಂತ್ರ ಜಪಿಸಿದ್ರೆ ಫಲ ಪ್ರಾಪ್ತಿಯಾಗಲಿದೆ. ಒಂದು ವೇಳೆ ಶನಿವಾರ ಅಮವಾಸ್ಯೆ ಬಂದಿದ್ದರೆ ಅದನ್ನು ಶನಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಅದ್ರ ಮಹತ್ವ ಇನ್ನಷ್ಟು ಹೆಚ್ಚಿರುತ್ತದೆ.

ಶ್ರಾದ್ಧ, ತರ್ಪಣವನ್ನು ಈ ಅಮವಾಸ್ಯೆಯಂದು ಬಿಡಬಹುದಾಗಿದೆ. ಕಾಲಸರ್ಪ ದೋಷವಿರುವವರು ಇದ್ರ ನಿವಾರಣೆಗೆ ಅಮವಾಸ್ಯೆಯಂದು ಪೂಜೆ ಮಾಡಬಹುದಾಗಿದೆ. ಕರಾಳ ರಾತ್ರಿ ಕೆಟ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ ಎಂದು ನಂಬಲಾಗಿದೆ. ತಾಂತ್ರಿಕರು ಈ ದಿನ ರಹಸ್ಯ ಪೂಜೆ ಮಾಡ್ತಾರೆ. ಹಾಗಾಗಿ ಅಮವಾಸ್ಯೆ ದಿನ ಸ್ಮಶಾನದ ಬಳಿ ಹೋಗಬಾರದೆಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...