alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಪೀಠೋಪಕರಣ ತರುವ ಮುನ್ನ ಎಚ್ಚರ

ಪೀಠೋಪಕರಣ ಮನೆ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದ್ರೆ ಮನೆಗೆ ಪೀಠೋಪಕರಣ ತರುವ ಮೊದಲು ಸೌಂದರ್ಯದ ಜೊತೆ ಯಾವ ಮರ, ಮಂಗಳಕರ ದಿನ, ಮನೆಯ ಯಾವ ಜಾಗದಲ್ಲಿಟ್ಟರೆ ಶುಭ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕು.

ಮೊಟ್ಟ ಮೊದಲನೆಯದಾಗಿ ಮನೆಗೆ ಪೀಠೋಪಕರಣ ತರುವ ಮೊದಲು ಮನೆಯ ವಾಸ್ತುವನ್ನು ತಿಳಿದುಕೊಳ್ಳಿ. ವಾಸ್ತುವಿಗೆ ವಿರುದ್ಧವಾಗಿ ಪೀಠೋಪಕರಣಗಳನ್ನು ಮನೆಗೆ ತಂದ್ರೆ ನಷ್ಟ ನಿಶ್ಚಿತ.

ಪೀಠೋಪಕರಣ ಖರೀದಿಗೂ ಶುಭ ದಿನವನ್ನು ನೋಡಬೇಕು. ಶನಿವಾರ, ಮಂಗಳವಾರ ಹಾಗೂ ಅಮವಾಸ್ಯೆ ದಿನ ಪೀಠೋಪಕರಣಗಳನ್ನು ಮನೆಗೆ ತರಬೇಡಿ. ಈ ದಿನ ಪೀಠೋಪಕರಣ ಖರೀದಿ ಮಾಡಿದ್ರೆ ಮನೆ ಸುಖ-ಶಾಂತಿ ನಷ್ಟವಾಗುತ್ತದೆ.

ಶ್ರೀಗಂಧ, ಸಾಗವಾನಿ, ಬೇವಿನ ಮರ, ಅಶೋಕ ಮರ ಸೇರಿದಂತೆ ಶುಭ ಮರದಿಂದ ಮಾಡಿದ ಪೀಠೋಪಕರಣವನ್ನು ಮಾತ್ರ ಖರೀದಿ ಮಾಡಿ.

ಹಳೆಯ ಪೀಠೋಪಕರಣಗಳನ್ನು ಎಂದೂ ಖರೀದಿ ಮಾಡಬೇಡಿ. ಹಾಗೆ ಹಳೆಯ ಮರದಿಂದ ಪೀಠೋಪಕರಣ ತಯಾರಿಸಬೇಡಿ.

ಪೀಠೋಪಕರಣ ತಯಾರಿಗೆ ಮರದ ತುಂಡು ಖರೀದಿ ಮಾಡುವಾಗ ಕೂಡ ಶುಭ ಮುಹೂರ್ತವನ್ನು ನೋಡಬೇಕು.

ಪಶ್ಚಿಮ-ದಕ್ಷಿಣ ದಿಕ್ಕಿಗೆ ಶುರು ಮಾಡಿ ಉತ್ತರ ಪೂರ್ವ ದಿಕ್ಕಿಗೆ ಪೀಠೋಪಕರಣ ತಯಾರಿಯನ್ನು ಮುಗಿಸಿ.

ಹೆಚ್ಚು ಮೂಲೆಗಳಿರುವ ಕುರ್ಚಿಗಳನ್ನು ಖರೀದಿ ಮಾಡಬೇಡಿ. ಇದು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...