alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಆಟಿಕೆ ವಿಮಾನ ಅರ್ಪಿಸಿದ್ರೆ ಈಡೇರುತ್ತೆ ವಿದೇಶ ಪ್ರಯಾಣದ ಕನಸು

intro-aeroplane_gurudwara

ಅಚ್ಚರಿ ಎನಿಸಿದ್ರೂ ಇದು ಸತ್ಯ. ಪಂಜಾಬ್ ನ ಈ ಗುರುದ್ವಾರದಲ್ಲಿ ಹರಕೆ ಸಲ್ಲಿಸಿದ್ರೆ ನಿಮಗೆ ನಿಗದಿತ ಸಮಯದೊಳಗೆ ವೀಸಾ ಸಿಗುತ್ತೆ. ಹಾಗಾಗಿ ಇದರ ಹೆಸರೇ ‘ಏರೋಪ್ಲೇನ್ ಗುರುದ್ವಾರ’. ಪಂಜಾಬ್ ನ ಜಲಂಧರ್ ನಿಂದ 12 ಕಿಮೀ ದೂರದಲ್ಲಿರುವ ತಲ್ಹಾನ್ ಎಂಬ ಗ್ರಾಮದಲ್ಲಿದೆ.

ಇದು ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ. ವಿದೇಶಕ್ಕೆ ಹೋಗುವ ಆಸೆ ಇರುವವರೆಲ್ಲ ಇಲ್ಲಿಗೆ ಆಟಿಕೆಯ ವಿಮಾನ ತೆಗೆದುಕೊಂಡು ಬರ್ತಾರೆ. ಅದನ್ನು ದೇವರಿಗೆ ಅರ್ಪಿಸಿ ಆದಷ್ಟು ಬೇಗ ವೀಸಾ ಸಿಗಲಿ ಅಂತಾ ಪ್ರಾರ್ಥಿಸ್ತಾರೆ. ಭಾನುವಾರವಂತೂ ನೂರಕ್ಕೂ ಹೆಚ್ಚು ಮಂದಿ ಇಂತಹ ಆಟಿಕೆ ವಿಮಾನವನ್ನು ಗುರುದ್ವಾರಕ್ಕೆ ಅರ್ಪಿಸ್ತಾರೆ.

ಆದ್ರೆ ದೇವಸ್ಥಾನ ಆಡಳಿತ ಮಂಡಳಿ ಮಾತ್ರ ಇದು ಕೇವಲ ಮೂಢನಂಬಿಕೆ ಎನ್ನುತ್ತಿದೆ. ಈ ಆಚರಣೆ ಹೇಗೆ ಪ್ರಾರಂಭವಾಯ್ತೋ ಗೊತ್ತಿಲ್ಲ ಎಂದಿದೆ. ಹೆಚ್ಚಾಗಿ ಯುವಕರೇ ಈ ಹರಕೆ ಹೊರುತ್ತಾರೆ. ಆಟಿಕೆ ವಿಮಾನಗಳನ್ನು ಗುರುದ್ವಾರಕ್ಕೆ ಕಾಣಿಕೆಯಾಗಿ ಸಲ್ಲಿಸ್ತಾರೆ. ಭಕ್ತರ ನಂಬಿಕೆಗೆ ಅಡ್ಡಿ ಬರಲು ಮುಂದಾಗದ ಆಡಳಿತ ಮಂಡಳಿ ಈ ಆಚರಣೆಗೆ ಅವಕಾಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...