alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕ ಮಾಸದ ಕೊನೆ ದಿನ ಹೀಗಿರಲಿ ನಿಮ್ಮ ಪೂಜೆ

ಜೂನ್ 13 ಅಧಿಕ ಮಾಸದ ಕೊನೆಯ ದಿನ. ಹಿಂದೂ ಧರ್ಮದಲ್ಲಿ ಅಧಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ವಿಶೇಷ ಉಪಾಯಗಳನ್ನು ಅನುಸರಿಸಿದ್ರೆ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಅಧಿಕ ಮಾಸದ ಕೊನೆ ದಿನ ಮಾಡಿದ ಕೆಲಸ ಕೂಡ ಫಲ ನೀಡುತ್ತದೆ.

ಇನ್ನೂ ಮೂರು ವರ್ಷಗಳ ನಂತ್ರ ಅಂದ್ರೆ 2021 ರಂದು ಮತ್ತೆ ಅಧಿಕ ಮಾಸ ಬರಲಿದೆ. ಹಾಗಾಗಿ ಈ ವರ್ಷದ ಅಧಿಕ ಮಾಸದ ಕೊನೆ ದಿನ ಕೆಲವೊಂದು ಉಪಾಯಗಳನ್ನು ಅನುಸರಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ.

ಅಧಿಕ ಮಾಸದ ಕೊನೆ ದಿನ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗಿ. ಹಳದಿ ಬಣ್ಣದ ಸಿಲ್ಕ್ ಬಟ್ಟೆ, ಮಿಠಾಯಿಯನ್ನು ಅರ್ಪಿಸಿ. ಇದು ಜೀವನದಲ್ಲಿ ಪ್ರೀತಿ ಹೆಚ್ಚಾಗಲು ನೆರವಾಗುತ್ತದೆ.

ಭಗವಂತ ಶ್ರೀಕೃಷ್ಣನ ಮಂದಿರಕ್ಕೆ ಶಂಖವನ್ನು ದಾನ ಮಾಡಿ. ಧನ ಸಂಬಂಧಿ ಸಮಸ್ಯೆ ಇದ್ರಿಂದ ದೂರವಾಗುತ್ತದೆ.

ಪವಿತ್ರ ನದಿಯಲ್ಲಿ ಶಂಖವನ್ನು ಬಿಡಿ. ತಾಯಿ ಲಕ್ಷ್ಮಿ ಬಳಿ ಬೇಡಿಕೆ ಈಡೇರಿಸುವಂತೆ ಪ್ರಾರ್ಥನೆ ಮಾಡಿ.

ಅಧಿಕ ಮಾಸದ ಕೊನೆ ದಿನ ದಕ್ಷಿಣ ಮುಖದ ಶಂಖಕ್ಕೆ ಹಾಲನ್ನು ಹಾಕಿ ಭಗವಂತ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...