alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ್ಷ ವಿವಾಹವಾಗುವವರಿಗೆ ಶುಭ ಸುದ್ದಿ

default

2017 ಎಲ್ಲರಿಗೂ ಶುಭವಾಗಲಿದೆ. ಈ ವರ್ಷ ಮದುವೆಗೆ 56 ಮಂಗಳಕರ ಮುಹೂರ್ತವಿದೆ. ಅಧಿಕ ಮದುವೆ ಮೇ-ಜೂನ್ ನಲ್ಲಿ ನಡೆಯಲಿದೆ. ಈ ಎರಡು ತಿಂಗಳಲ್ಲಿ 12-12 ಮುಹೂರ್ತವಿದ್ದು, ಮದುವೆಯಾಗುವವರು ಈಗಲೇ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.

ಮುಹೂರ್ತದ ಬಗ್ಗೆ ಗಮನ ನೀಡುವುದಾದಲ್ಲಿ ಜನವರಿಯಲ್ಲಿ 5, ಫೆಬ್ರವರಿಯಲ್ಲಿ 8, ಮಾರ್ಚ್ ನಲ್ಲಿ 2, ಏಪ್ರಿಲ್ ನಲ್ಲಿ 6 ಹಾಗೂ ಮೇ-ಜೂನ್ ನಲ್ಲಿ 12-12 ಮುಹೂರ್ತಗಳಿವೆ. ಜುಲೈನಲ್ಲಿ 3, ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ 5-5 ಮುಹೂರ್ತವಿದೆ. ಈಗಾಗಲೇ ಅನೇಕರು ಮುಹೂರ್ತ ಫಿಕ್ಸ್ ಮಾಡಿಕೊಂಡು ಖರೀದಿ, ಛತ್ರದ ಬುಕ್ಕಿಂಗ್ ಶುರು ಮಾಡಿದ್ದಾರೆ. ಹಾಗೆ ಹೊಟೇಲ್ ಗಳ ಬುಕ್ಕಿಂಗ್ ಕೂಡ ಈಗಲೇ ಶುರುವಾಗಿದೆ.

ಮುಹೂರ್ತದ ದಿನಾಂಕ ಹೀಗಿದೆ:

ಜನವರಿ : 16, 17, 18, 22, 29 ಫೆಬ್ರವರಿ : 2, 5, 6, 15, 18, 19, 27, 28 ಮಾರ್ಚ್: 4, 13 ಏಪ್ರಿಲ್ : 18, 19, 20, 21, 28, 29 ಮೇ: 4, 6, 8, 9, 12, 16, 21, 22, 23, 26, 27, 31 ಜೂನ್ : 2, 3, 5, 6, 7, 8, 18, 19, 20, 27, 28, 30 ಜುಲೈ : 1, 2, 3 ನವೆಂಬರ್ : 23, 24, 28, 29, 30 ಡಿಸೆಂಬರ್ : 1, 3, 4, 10, 11.

ಮುಹೂರ್ತವಿಲ್ಲದ ಕಾರಣ ಮೂರು ತಿಂಗಳು ಯಾವುದೇ ಮದುವೆ ಸಮಾರಂಭಗಳು ನಡೆಯುವುದಿಲ್ಲ. ಹಾಗಾಗಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಸಾಕಷ್ಟು ಮದುವೆಗಳು ನಡೆಯಲಿದ್ದು, ಎಲ್ಲ ಛತ್ರಗಳು, ದೇವಸ್ಥಾನಗಳು ಬ್ಯುಸಿಯಾಗಿರಲಿವೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...