alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಬೆಡ್ ರೂಮಿಗೂ ಅಂಟಿಕೊಂಡಿರುವ ಶೌಚಾಲಯದಿಂದ ಎಷ್ಟು ನಷ್ಟ ಗೊತ್ತಾ…?

ಬಹುತೇಕರು ಜಾಗ ಉಳಿಸಲು ಬೆಡ್ ರೂಮಿನೊಳಗೆ ಶೌಚಾಲಯವನ್ನು ನಿರ್ಮಿಸಿಕೊಂಡಿರುತ್ತಾರೆ. ಐಷಾರಾಮಿ ಬಗ್ಗೆ ಹೇಳೋದಾದ್ರೆ ಬೆಡ್ ರೂಮ್ ಒಳಗೆ ಶೌಚಾಲಯವಿರುವುದು ಒಳ್ಳೆಯದು. ಆದ್ರೆ ವಾಸ್ತು ಶಾಸ್ತ್ರ ಬೆಡ್ ರೂಮಿನೊಳಗೆ ಶೌಚಾಲಯ ನಿರ್ಮಾಣ ಮಾಡಬೇಡಿ ಎನ್ನುತ್ತದೆ. ಇದ್ರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ.

ಈಗಾಗಲೇ ಬೆಡ್ ರೂಮಿನೊಳಗೆ ಶೌಚಾಲಯವಿದ್ರೆ ಸಣ್ಣಪುಟ್ಟ ಉಪಾಯಗಳ ಮೂಲಕ ವಾಸ್ತು ದೋಷವನ್ನು ನೀವು ನಿವಾರಿಸಬಹುದು. ಬಾತ್ ರೂಮಿನಲ್ಲಿರುವ ಕನ್ನಡಿಯನ್ನು ಬಾಗಿಲಿಗೆ ಸರಿಯಾಗಿ ಹಾಕಬೇಡಿ. ಬಾತ್ ರೂಮಿನ ಬಾಗಿಲು ತೆಗೆದಾಗೆಲ್ಲ ನಕಾರಾತ್ಮಕ ಶಕ್ತಿ ಮನೆಯಿಂದ ಬಾತ್ ರೂಮಿಗೆ ಹೋಗುತ್ತದೆ. ಬಾಗಿಲಿನಲ್ಲೇ ಕನ್ನಡಿ ಹಾಕಿದ್ರೆ ಕನ್ನಡಿಗೆ ಬಡಿದು ಮತ್ತೆ ನಕಾರಾತ್ಮಕ ಶಕ್ತಿ ಬೆಡ್ ರೂಮ್ ಪ್ರವೇಶ ಮಾಡುತ್ತದೆ.

ಉಪ್ಪು ರುಚಿಗೆ ಮಾತ್ರವಲ್ಲ ಅದ್ರಲ್ಲಿ ಅನೇಕ ಶಕ್ತಿ ಅಡಗಿದೆ. ಒಂದು ಪಾತ್ರೆಗೆ ಉಪ್ಪನ್ನು ಹಾಕಿ ಬಾತ್ ರೂಮಿನ ಸೂಕ್ತ ಸ್ಥಳದಲ್ಲಿ ಇಡಿ. ಉಪ್ಪು ಬಾತ್ ರೂಮಿನಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹಿಡಿದಿಡುತ್ತದೆ. ಬಾತ್ ರೂಮಿನಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತದೆ.

ಬೆಡ್ ರೂಮಿನಲ್ಲಿ ಬಾತ್ ರೂಮ್ ಇದ್ದರೆ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಿ. ದಿನಕ್ಕೆ ಎರಡು ಬಾರಿಯಾದ್ರೂ ಬಾತ್ ರೂಮ್ ಕ್ಲೀನ್ ಮಾಡಿದ್ರೆ ನಕಾರಾತ್ಮಕ ಶಕ್ತಿ ಹೊರಗೆ ಹೋಗುವುದಿಲ್ಲ.

ಬಾತ್ ರೂಮಿನ ಬಾಗಿಲನ್ನು ತೆಗೆದಿಡಬೇಡಿ. ಹಾಗೆ ಬಾತ್ ರೂಮಿನ ಬಾಗಿಲಿಗೆ ಪರದೆ ಹಾಕಿದ್ರೆ ಒಳ್ಳೆಯದು.

ನಿಮ್ಮ ಭವಿಷ್ಯ ತಿಳಿಯಲು ಸಂಪರ್ಕಿಸಿ:
ಪಂಡಿತ್ ಅನಂತ್ ಪ್ರಸಾದ್ ಶರ್ಮಾ
ಮೊಬೈಲ್:‌ 9845626805

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...