alex Certify ಜೀರ್ಣಕ್ರಿಯೆಗೆ ಸುಲಭವಾಗುವಂತಹ ಬೆಟ್ಟದ ನೆಲ್ಲಿ ಜ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆಗೆ ಸುಲಭವಾಗುವಂತಹ ಬೆಟ್ಟದ ನೆಲ್ಲಿ ಜ್ಯೂಸ್

ಜ್ಯೂಸ್ ಯಾರಿಗೆ ತಾನೆ ಇಷ್ಟ ಆಗಲ್ಲಾ ಹೇಳಿ…? ಆದ್ರೆ ಕೆಲವೊಮ್ಮೆ ಅನಾರೋಗ್ಯದ ಕಾರಣ ಹಣ್ಣಿನ ರಸಗಳನ್ನು ಕುಡಿಯಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸುಲಭವಾಗುವಂತಹ ಈ ಬೆಟ್ಟದ ನೆಲ್ಲಿ ಜ್ಯೂಸ್ ಅನ್ನು ಟ್ರೈ ಮಾಡಬಹುದು. ಇದರಲ್ಲಿ ಸಪೋಟವನ್ನು ಉಪಯೋಗಿಸುವುದರಿಂದ ಕಣ್ಣುಗಳಿಗೂ ಸಹ ಒಳ್ಳೆಯದು.

ಬೇಕಾಗಿರುವ ಪದಾರ್ಥಗಳು :

ಬೆಟ್ಟದ ನೆಲ್ಲಿಕಾಯಿ : 4-5 ದೊಡ್ಡ ಗಾತ್ರದ್ದು

ಸಪೋಟ : 2 ಸಣ್ಣದು

ನಿಂಬೆಹಣ್ಣಿನ ರಸ : ಒಂದು ಚಮಚ

ಶುಂಠಿ : 2 ಇಂಚಿನಷ್ಟು

ಸಕ್ಕರೆ : ಒಂದು ಚಮಚ

ಉಪ್ಪು : ಚಿಟಿಕೆ

ನೀರು : 2 ಕಪ್

ಮಾಡುವ ವಿಧಾನ : ಬೆಟ್ಟದ ನೆಲ್ಲಿ ಮತ್ತು ಸಪೋಟದ ರಸವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಇದಕ್ಕೆ 2 ಕಪ್ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣಕ್ಕೆ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿ. ಕೊನೆಯಲ್ಲಿ ನಿಂಬೆಹಣ್ಣಿನ ರಸ, ಜಜ್ಜಿದ ಶುಂಠಿಯನ್ನು ಸೇರಿಸಿ ಮಿಕ್ಸ್ ಮಾಡಿ, ಫಿಲ್ಟರ್ ಮಾಡಿಕೊಂಡು ಒಂದು ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿಟ್ಟು ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...